ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 21,393ಕ್ಕೆ ಏರಿಕೆ: 681 ಮಂದಿ ಬಲಿ

ಹೊಸದಿಲ್ಲಿ, ಎ.23: ಕೊರೋನ ಸೋಂಕಿಗೆ ದೇಶದಲ್ಲಿ ಈ ವರೆಗೂ 681 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 21,393 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಮಾಹಿತಿ ನೀಡಿದ್ದು, ದೇಶದಲ್ಲಿ 21393 ಮಂದಿ ಸೋಂಕಿಗೊಳಗಾಗಿದ್ದು, ವೈರಸ್’ಗೆ 681 ಮಂದಿ ಬಲಿಯಾಗಿದ್ದಾರೆ. ಸೊಂಕಿಗೊಳಗಾಗಿರುವ 21393 ಮಂದಿಯ ಪೈಕಿ 16454 ಮಂದಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 4257 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆಂದು ಹೇಳಿದೆ.

Also Read  ಇಬ್ಬರು ತಾಲಿಬಾನ್ ಉಗ್ರರ ಹತ್ಯೆ..!!

ಈ ನಡುುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕೂಡ ವೈದ್ಯಕೀಯ ಪರೀಕ್ಷೆಗಳ ಕುರಿತಂತೆ ಮಾಹಿತಿ ನೀಡಿದ್ದು, 500542 ಸ್ಯಾಂಪಲ್’ಗಳ ಪೈಕಿ ಎಪ್ರಿಲ್ 23ರ ಬೆಳಿಗ್ಗೆ 9ರವರೆಗೆ 485172 ಮಂದಿಯ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 21797 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ.

error: Content is protected !!
Scroll to Top