ಕೇರಳದಲ್ಲಿ ಸೋಮವಾರದಿಂದ ಬಸ್ ಸಂಚಾರ ಆರಂಭ; ಹೊಟೇಲ್, ರೆಸ್ಟೋರೆಂಟ್‌ಗಳಿಗೂ ಅನುಮತಿ

ತಿರುವನಂತಪುರ, ಎ.19: ಕೇರಳ ಕೊರೋನ ನಿಯಂತ್ರಿಸುವಲ್ಲಿ ಮಾದರಿಯಾಗಿದ್ದು, ಇದೀಗ ರಾಜ್ಯದಲ್ಲಿ ಕೊರೋನ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ನಾಳೆಯಿಂದ ಕೇರಳದಲ್ಲಿ ಹೊಟೇಲ್, ರೆಸ್ಟೋರೆಂಟ್ ಗಳು, ಬಸ್ ಸಂಚಾರ ಪ್ರಾರಂಭವಾಗಲಿದೆ.

ನಾಳೆಯಿಂದ ಕೇರಳದ 14 ಜಿಲ್ಲೆಗಳಲ್ಲಿ ಜನಜೀವನ ಸಹಜಸ್ಥಿತಿಗೆ ಮರಳಲಿದೆ. 21 ದಿನಗಳ ಲಾಕ್‍ಡೌನ್ ಬಳಿಕ ವಿನಾಯ್ತಿ ನೀಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೇರಳ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇತ್ತೀಚೆಗೆ ಕೊರೋನಾ ನಿಯಂತ್ರಿಸುವಲ್ಲಿ ಕೇರಳ ಸರಕಾರದ ಕ್ರಮವನ್ನು ಅಂತರಾಷ್ಟ್ರೀಯ ಮಾದ್ಯಮಗಳು ಶ್ಲಾಘಿಸಿದ್ದವು.

ಕೇರಳದ ಜಿಲ್ಲೆಗಳನ್ನು ಕೆಂಪು, ಹಳದಿ, ಹಸಿರು ವಲಯವಾಗಿ ವಿಂಗಡಿಸಲಾಗಿದೆ. ಮೇ.3ರವರೆಗೆ ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಮಲ್ಲಪುರಂ ಸಂಪೂರ್ಣ ಲಾಕ್‍ಡೌನ್ ಆಗಿರಲಿದೆ. ಕೆಂಪು ವಲಯ ಹೊರತುಪಡಿಸಿ ಉಳಿದ ಕಡೆಗಳಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ.

Also Read  ಕಡಬ: ನಿಯಂತ್ರಣ ತಪ್ಪಿ ಉರುಳಿ ಬಿದ್ದ ಬೈಕ್ ➤ ಸವಾರ ಸ್ಥಳದಲ್ಲೇ ಮೃತ್ಯು

ಇನ್ನು ಬಸ್‍ಗೆ ಹತ್ತುವ ಮೊದಲು ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿದ್ದು, ನಿಂತು ಪ್ರಯಾಣವನ್ನು ನಿಷೇಧಿಸಲಾಗಿದೆ. ಸೋಮವಾರ, ಬುಧವಾರ, ಶುಕ್ರವಾರ ಬೆಸ ಸಂಖ್ಯೆಯೊಂದಿಗೆ ಕೊನೆ ಆಗುವ ವಾಹನಗಳು ಸಂಚರಿಸಬಹುದು. ಮಂಗಳವಾರ, ಗುರುವಾರ ಶನಿವಾರ ಸಮ ಸಂಖ್ಯೆಯೊಂದಿಗೆ ಅಂತ್ಯವಾಗುವ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಇನ್ನು ಬೈಕ್ ಸವಾರರಿಗೆ ಡಬಲ್ ರೈಡಿಂಗ್‍ಗೆ ಅವಕಾಶವಿದೆ.

error: Content is protected !!
Scroll to Top