ಹೊಸದಿಲ್ಲಿ, ಎ.19: ಕೊರೋನ ಲಾಕ್‌ಡೌನ್ ದಿನಾಂಕದ ನಂತರ ಅಂದರೆ ಮೇ 3 ರ ನಂತರ ನೀವು ವಿಮಾನ ಅಥವಾ ರೈಲಿನಲ್ಲಿ ಪ್ರಯಾಣಿಸುವ ಬಗ್ಗೆ ಯೋಚಿಸುತ್ತಿದ್ದರೆ ಖಂಡಿತ ಆ ಆಲೋಚನೆಯನ್ನು ಬಿಟ್ಟು ಬಿಡಿ. ಹೌದು, ಭಾರತದಲ್ಲಿ 40 ದಿನಗಳ ಲಾಕ್‌ಡೌನ್ ಮುಗಿದ ನಂತರವೂ ಮೇ 3 ರ ನಂತರ ವಿಮಾನ ಮತ್ತು ರೈಲು ಪ್ರಯಾಣದ ನಿಷೇಧ ಮುಂದುವರಿಯಬಹುದು ಎನ್ನಲಾಗಿದೆ.
ಈ ನಡುವೆ ಲಾಕ್‌ಡೌನ್‌ನ ಎರಡನೇ ಹಂತವು ಮೇ 3 ರಂದು ಕೊನೆಗೊಳ್ಳುತ್ತದೆ. ಲಾಕ್ ಡೌನ್ ಅವಧಿಯಲ್ಲಿ ಎಲ್ಲಾ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನಗಳನ್ನು ಮುಂದೂಡಲಾಗಿದೆ. ಏತನ್ಮಧ್ಯೆ, ಏರ್ ಇಂಡಿಯಾ ಮೇ 4 ರಿಂದ ಕೆಲವು ಮಾರ್ಗಗಳಲ್ಲಿ ದೇಶೀಯ ವಿಮಾನಗಳಿಗಾಗಿ ಮತ್ತು ಜೂನ್ 1 ರಿಂದ ಆಯ್ದ ಅಂತರರಾಷ್ಟ್ರೀಯ ವಿಮಾನಗಳಿಗಾಗಿ ಬುಕಿಂಗ್ ಪ್ರಾರಂಭಿಸಿದೆ ಎಂದು ಹೇಳಿದೆ.
ವಾಯು ಮತ್ತು ರೈಲು ಪ್ರಯಾಣವನ್ನು ಪ್ರಾರಂಭಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅಂತಿಮ ತೀರ್ಮಾನ ಎನ್ನಲಾಗಿದ್ದು, ಲಾಕ್‌ಡೌನ್‌ನಲ್ಲಿ ಸಿಕ್ಕಿಬಿದ್ದ ವಲಸೆ ಕಾರ್ಮಿಕರಿಗಾಗಿ ವಿಶೇಷ ರೈಲುಗಳನ್ನು ಸಂಚಾರ ಮಾಡುವುದಕ್ಕೆ ಅವಕಾಶ ನೀಡುವ ಬಗ್ಗೆ ಕೂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಕೆಲವು ಕೇಂದ್ರ ಸಚಿವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.