‘ಕೆಂಪೇಗೌಡ – 2’ ಸಿನಿಮಾ ಚಿತ್ರೀಕರಣ ವೇಳೆ ಅಪಘಾತ ► ಕನ್ನಡದ ಚಿತ್ರನಟರಿಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಚೆನ್ನೈ, ಆ.30. ಕೆಂಪೇಗೌಡ – 2 ಕನ್ನಡ ಸಿನಿಮಾದ ಚಿತ್ರೀಕರಣ ವೇಳೆ ಸಂಭವಿಸಿದ ಅಪಘಾತದಲ್ಲಿ ನಟರಾದ ಲೂಸ್ ಮಾದ ಯೋಗಿ ಮತ್ತು ಕೋಮಲ್ ಗಾಯಗೊಂಡಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಬುಧವಾರ ಅಪರಾಹ್ನ ಚೆನ್ನೈನಲ್ಲಿ ನಡೆದಿದೆ.

ತಮಿಳುನಾಡಿನ ಮಹಾಬಲಿಪುರಂ ಬಳಿ ಕೆಂಪೇಗೌಡ – 2 ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣಕ್ಕಾಗಿ ಅಲ್ಬೇರಿಯನ್ ಬೈಕ್ ನಲ್ಲಿ ಕೆಳಮಟ್ಟದಿಂದ ಬೈಕ್ ವೀಲಿಂಗ್ ಮಾಡುವ ದೃಶ್ಯವಿತ್ತೆನ್ನಲಾಗಿದೆ. ಸಾಹಸ ಮಾಡುವ ಸಂದರ್ಭದಲ್ಲಿ ಬೈಕ್ ಉಲ್ಟಾ ಬಿದ್ದ ಪರಿಣಾಮ ನಟರಾದ ಯೋಗಿ ಹಾಗೂ ಕೋಮಲ್‍ಗೆ ಗಾಯವಾಗಿದೆ. ಗಾಯಾಳುಗಳನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಕಾಸರಗೋಡು: ಲಾರಿ-ಬೈಕ್ ಢಿಕ್ಕಿ..!     ➤ ಪರೀಕ್ಷೆ ಬರೆದು ಹಿಂತಿರುಗುತ್ತಿದ್ದ ವಿದ್ಯಾರ್ಥಿ ಮೃತ್ಯು

ಕೋಮಲ್ ನಾಯಕ ನಟನಾಗಿರುವ ಕೆಂಪೇಗೌಡ ಸಿನಿಮಾದಲ್ಲಿ ಯೋಗಿ ಸಹ ನಟನಾಗಿ ಅಭಿನಯಿಸುತ್ತಿದ್ದಾರೆ.

error: Content is protected !!
Scroll to Top