ಬ್ರೇಕಿಂಗ್ – ಮೇ 03 ರ ವರೆಗೆ ಲಾಕ್‌ಡೌನ್ ಮುಂದುವರಿಕೆ ➤ ಪ್ರಧಾನಿ ಮೋದಿ ಘೋಷಣೆ

(ನ್ಯೂಸ್ ಕಡಬ) newskadaba.com ನವದೆಹಲಿ, ಎ.14. ಜಗತ್ತನ್ನೇ ಬೆಚ್ಚಿಬೀಳಿಸಿರುವ ಕೊರೋನಾ ಮಹಾಮಾರಿಯ ವಿರುದ್ಧ ಸಮರ ಸಾರಿರುವ ಭಾರತ ದೇಶದಲ್ಲಿನ ಮೊದಲನೇ ಲಾಕ್ಡೌನ್ ಆದೇಶವು ಇಂದಿಗೆ ಮುಕ್ತಾಯವಾಗಿದ್ದು, ಎರಡಬೇ ಹಂತದ ಲಾಕ್ಡೌನ್ ಮೇ 03 ರ ವರೆಗೆ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಹೇಳಿದ್ದಾರೆ.

ಜಗತ್ತಿನಲ್ಲೇ ಭಾರತ ದೇಶವು ಕೊರೋನಾ ವೈರಸನ್ನು ಮೆಟ್ಟಿ ನಿಂತಿದ್ದು, ಮೂರನೇ ಹಂತದಲ್ಲೂ ಪರಿಸ್ಥಿತಿ ಹತೋಟಿಯಲ್ಲಿದೆ. ಮೇ 03 ರ ವರೆಗೆ ಲಾಕ್ಡೌನ್ ಅನಿವಾರ್ಯವಾಗಿದ್ದು, ಲಾಕ್ಡೌನ್ ಉಲ್ಲಂಘಿಸುವ ಪ್ರದೇಶದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಬಹುದೆಂದು ಎಚ್ಚರಿಕೆ ನೀಡಿದ್ದಾರೆ.

Also Read  ’ಲಡಾಖ್‌ ನಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸಲು ಗೃಹ ಸಚಿವಾಲಯ ನಿರ್ಧಾರ’ ಗೃಹ ಸಚಿವ ಅಮಿತ್ ಶಾ ಹೇಳಿಕೆ         

error: Content is protected !!
Scroll to Top