ದೇಶದಲ್ಲಿ 300 ಕ್ಕೂ ಅಧಿಕ ಮಂದಿ ಕೊರೋನದಿಂದ ಸಾವು: ಸೋಂಕಿತರ ಸಂಖ್ಯೆ 9,152 ಕ್ಕೆ ಏರಿಕೆ

ಹೊಸದಿಲ್ಲಿ, ಎ.13: ಭಾರತದಲ್ಲಿ ಕೊರೋನ ವೈರಸ್ ಸೋಂಕಿನಿಂದ ಕಳೆದ 24 ಗಂಟೆಗಳಲ್ಲಿ 35 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದಾಗಿ ಕೋವಿಡ್‌-19ನಿಂದ ಮೃತಪಟ್ಟವರ ಸಂಖ್ಯೆ 308ಕ್ಕೆ ಏರಿಕೆಯಾಗಿರುವುದು ಕೇಂದ್ರದ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿಯಿಂದ ತಿಳಿದು ಬಂದಿದೆ.

ಸೋಮವಾರ ಬೆಳಿಗ್ಗೆ 9ರ ವರೆಗೂ ಕೊರೋನ ವೈರಸ್‌ ಸೋಂಕು ದೃಢಪಟ್ಟ 705 ಹೊಸ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದೇಶದಾದ್ಯಂತ ಒಟ್ಟು ಕೊರೊನಾ ಪೀಡಿತ ಪ್ರಕರಣಗಳು 9,152ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಒಟ್ಟು 7,987 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 856 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೋನ ಸೋಂಕು ಪ್ರಕರಣಗಳು 2,000 ಸಮೀಪಿಸಿದ್ದು, ಒಟ್ಟು 1,985 ಪ್ರಕರಣಗಳು ವರದಿಯಾಗಿವೆ.

ಸೋಂಕಿನಿಂದ ಈಗಾಗಲೇ 149 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸಾವು ಮಹಾರಾಷ್ಟ್ರದಲ್ಲಿ ದಾಖಲಾಗಿದೆ.

Also Read  ರಕ್ತವರ್ಣ ಚಂದ್ರ ಗ್ರಹಣ ಎಲ್ಲೆಲ್ಲಿ ಸಂಭವಿಸುತ್ತೆ?

ಇನ್ನೂ ದೆಹಲಿಯಲ್ಲಿ ಒಟ್ಟು 1,154 ಪ್ರಕರಣಗಳು, 24 ಮಂದಿ ಸಾವು, ತಮಿಳುನಾಡಿನಲ್ಲಿ 1,043 ಪ್ರಕರಣಗಳು, 11 ಮಂದಿ ಸಾವು, ರಾಜಸ್ಥಾನದಲ್ಲಿ 804 ಪ್ರಕರಣಗಳು, 3 ಮಂದಿ ಸಾವಿಗೀಡಾಗಿದ್ದಾರೆ. ಕರ್ನಾಟಕದಲ್ಲಿ 232 ಸೋಂಕು ಪ್ರಕರಣಗಳು ದಾಖಲಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ.

ಶನಿವಾರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಚರ್ಚಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಎಪ್ರಿಲ್‌ 14ರ ನಂತರವೂ ಲಾಕ್‌ಡೌನ್‌ ಮುಂದುವರಿಸುವ ಸುಳಿವು ನೀಡಿದ್ದರು. ಈಗಾಗಲೇ ಒಡಿಶಾ, ಮಹಾರಾಷ್ಟ್ರ, ಪಂಜಾಬ್‌ ಹಾಗೂ ಪಶ್ಚಿಮ ಬಂಗಾಳ ಎಪ್ರಿಲ್‌ 30ರ ವರೆಗೂ ಲಾಕ್‌ಡೌನ್‌ ವಿಸ್ತರಿಸಿರುವುದಾಗಿ ಘೋಷಿಸಿವೆ. ಕರ್ನಾಟಕದಲ್ಲೂ ಕೆಲವು ಸಡಿಲಿಕೆಗಳೊಂದಿಗೆ ಲಾಕ್‌ಡೌನ್‌ ಎರಡು ವಾರಗಳು ಮುಂದುವರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

20,000 ರೈಲು ಬೋಗಿಗಳನ್ನು ಐಸೊಲೇಶನ್‌ ವಾರ್ಡ್‌ಗಳಾಗಿ ಪರಿವರ್ತಿಸಲಾಗುತ್ತಿದ್ದು, 5,000 ಬೋಗಿಗಳು ಸಿದ್ಧವಾಗಿದೆ.

error: Content is protected !!
Scroll to Top