ಕೊರೋನ ವೈರಸ್ ಗೆ ಭಾರತದಲ್ಲಿ ಮತ್ತೊಬ್ಬ ವೈದ್ಯ ಬಲಿ

ಇಂದೋರ್, ಎ.12: ಭಾರತದಲ್ಲಿ ಕೊರೋನ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕೊರೋನ ವೈರಸ್ ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರು ಕೊವಿಡ್ 19 ಗೆ ಬಲಿಯಾಗಿದ್ದಾರೆ.

ಮಧ್ಯಪ್ರದೇಶದ ಇಂದೋರ್ ನಲ್ಲಿ 65 ವರ್ಷದ ವೈದ್ಯ ಓಂ ಪ್ರಕಾಶ್ ಚೌಹಾಣ್ ಅವರು ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಆಯುಷ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಚೌಹಾಣ್ ಅವರಿಗೆ ಇತ್ತೀಚೆಗೆ ಕೊವಿಡ್ 19 ಸೋಂಕು ದೃಢಪಟ್ಟಿತ್ತು.

ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಚೌಹಾಣ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯಾಧಿಕಾರಿ ಪ್ರವೀಣ್ ಜಾಡಿಯಾ ಹೇಳಿದ್ದಾರೆ.

Also Read  10 ವರ್ಷಗಳ ಹಿಂದಿನ ಡೀಸೆಲ್‌ ವಾಹನಗಳ ನಿಷೇಧ ► ಹಸಿರು ನ್ಯಾಯ ಮಂಡಳಿಯ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ

error: Content is protected !!
Scroll to Top