ಮುಂಬೈ ತಾಜ್ ಮಹಲ್ ಹೊಟೇಲ್ ನ ಆರು ಮಂದಿ ಸಿಬ್ಬಂದಿಗೆ ಕೊರೋನ ಪಾಸಿಟಿವ್

ಮಹಾರಾಷ್ಟ್ರ, ಎ.12: ಮುಂಬೈ ತಾಜ್ ಮಹಲ್ ಹೊಟೇಲ್ ನ ಆರು ಮಂದಿ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ವರದಿ ಬಂದಿದೆ ಇಂಡಿಯಾ ಟುಡೇ ವರದಿ ಮಾಡಿದೆ.

ಸದ್ಯ ಆರು ಮಂದಿ ತಾಜ್ ಮಹಲ್ ಪ್ಯಾಲೇಸ್ ಹೊಟೇಲ್ ಸಿಬ್ಬಂದಿಯ ಆರೋಗ್ಯ ಸ್ಥಿರವಾಗಿದ್ದು ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ. ಗೌತಮ್ ಬನ್ಸಾಲಿ ತಿಳಿಸಿದ್ದಾರೆ.

ಆದರೆ ತಾಜ್ ಹೊಟೇಲ್ ನ ಎಷ್ಟು ಮಂದಿ ನೌಕರರಿಗೆ ಸೋಂಕು ತಗುಲಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. 6 ಮಂದಿಯಲ್ಲಿ ಪಾಸಿಟಿವ್ ವರದಿ ಬಂದ ತಕ್ಷಣವೇ ಅವರೊಂದಿಗೆ ಸಂಪರ್ಕದಲ್ಲಿದ್ದ ಇತರರನ್ನು ಹೋಮ್ ಕ್ವಾರಂಟೈನ್ ನಲ್ಲಿಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Also Read  ಐಸ್ ಕ್ರೀಂ ತಿಂದ ಬಳಿಕ ಅಸ್ವಸ್ಥನಾಗಿ ಬಾಲಕ ಮೃತ್ಯು

ದಕ್ಷಿಣ ಮುಂಬೈನಲ್ಲಿರುವ ವಿಶ್ವ ಪ್ರಸಿದ್ದ ತಾಜ್ ಮಹಲ್ ಪ್ಯಾಲೇಸ್ ಮತ್ತು ಟವರ್ ಹೊಟೇಲ್ ನಲ್ಲಿ ಲಾಕ್ ಡೌನ್ ಕಾರಣದಿಂದ ಯಾವುದೇ ಪ್ರವಾಸಿಗರು ಇಲ್ಲ, ಕೆಲವೇ ಸಿಬ್ಬಂದಿಗಳು ಮಾತ್ರ ಕೆಲಸಕ್ಕೆ ಹಾಜರಾಗುತ್ತಿದ್ದರು ಎಂದು ಇದೇ ವೇಳೆ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಕೋವಿಡ್-19 ಸೋಂಕಿಗೆ ಮಹಾರಾಷ್ಟ್ರದಲ್ಲಿ 1,700ಕ್ಕಿಂತ ಹೆಚ್ಚು ಜನರು ತುತ್ತಾಗಿದ್ದು, ಇದರಲ್ಲಿ 1400 ಕ್ಕಿಂತ ಹೆಚ್ಚು ಜನರು ಮುಂಬೈನ ಜನರು ವರದಿ ತಿಳಿಸಿದ್ದಾರೆ.

error: Content is protected !!
Scroll to Top