ದೇಶದಲ್ಲಿ ಒಂದೇ ದಿನ ಕೊರೋನಗೆ 34 ಮಂದಿ ಸಾವು: 909 ಮಂದಿಗೆ ಸೋಂಕು ದೃಢ

ಹೊಸದಿಲ್ಲಿ, ಎ.12: ಮಹಾಮಾರಿ ಕೊರೋನ ವೈರಸ್​ ಅಟ್ಟಹಾಸ ಮುಂದುವರಿಯುತ್ತಲೇ ಇದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 8,356ಕ್ಕೆ ಏರಿಕೆಯಾಗಿದೆ.

ಕಳೆದ 24ಗಂಟೆಯಲ್ಲಿ 909 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದ್ದು ಒಟ್ಟು 34 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಭಾರತದಲ್ಲಿ ಒಟ್ಟು ಸಾವಿನಸಂಖ್ಯೆ 273ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಾ.24ರ ಮಧ್ಯರಾತ್ರಿಯಿಂದ ಭಾರತ ಲಾಕ್​ಡೌನ್​ ಆಗಿತ್ತು. ಎ.14ರವರೆಗೆ ಅದರ ಅವಧಿ ಇತ್ತು. ಆದರೆ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್​ ನಡೆಸಿ, ಲಾಕ್​ಡೌನ್ ಮುಂದುವರಿಸುವ ಸಂಬಂಧ ಚರ್ಚೆ ನಡೆಸಿದ್ದಾರೆ.

Also Read  ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಇರಿದು ಕೊಂದ ಪಾಪಿ ಮಗಳು...!! 

error: Content is protected !!
Scroll to Top