ಕೊರೋನ ವೈರಸ್‌ಗೆ ಕೇರಳದಲ್ಲಿ ಮೂರನೇ ಬಲಿ: 71 ವರ್ಷದ ವೃದ್ಧ ಸಾವು

ಕಣ್ಣೂರು, ಎ.11: ಕೊರೋನ ವೈರಸ್‌ಗೆ ಕೇರಳದಲ್ಲಿ ಮೂರನೇ ಬಲಿಯಾಗಿದೆ.

ಕೇರಳದ ಕಣ್ಣೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾಂಡಿಚೇರಿಯ ಮಾಹೆ ನಿವಾಸಿ 71 ವರ್ಷದ ವ್ಯಕ್ತಿ ಮೃತರಾಗಿದ್ದಾರೆ.

ವ್ಯಕ್ತಿಗೆ ಆರೋಗ್ಯದಲ್ಲಿ ತೀವ್ರ ತೊಂದರೆ ಉಂಟಾಗಿದ್ದು ಕಳೆದ ಎರಡು ವಾರಗಳಿಂದ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಅವರು ಮಾರ್ಚ್ 27 ರಂದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು ಆ ಬಳಿಕ ಡಿಸ್ಚಾರ್ಜ್ ಆಗಿದ್ದರು. ಆ ಬಳಿಕ ವ್ಯಕ್ತಿ ಪುನಃ ಆಸ್ಪತ್ರೆಗೆ ದಾಖಲಾಗಿದ್ದು ವೃದ್ಧ ವ್ಯಕ್ತಿಗೆ ನ್ಯುಮೋನಿಯಾವಿದ್ದು ಎರಡು ಕಿಡ್ನಿಗಳು ವೈಫಲ್ಯ ಹೊಂದಿದ್ದವು.

Also Read  ಕಾಸರಗೋಡು: ಯೂತ್ ಲೀಗ್ ಹಾಗೂ ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ ➤ ಯೂತ್ ಲೀಗ್ ಕಾರ್ಯಕರ್ತನ ಮನೆಗೆ ಕಚ್ಚಾ ಬಾಂಬ್ ಎಸೆದು, ಮನೆಗೆ ನುಗ್ಗಿ ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ➤ ಓರ್ವ ಮೃತ್ಯು, ಮತ್ತೋರ್ವ ಗಂಭೀರ

ಹಾಗೆಯೇ ಈ ವ್ಯಕ್ತಿಗೆ ಯಾವುದೇ ಪ್ರಯಾಣದ ಇತಿಹಾಸ ಇಲ್ಲ. ಆದರೆ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

error: Content is protected !!
Scroll to Top