ಹೊಸದಿಲ್ಲಿ, ಎ.9: ಬುಧವಾರ ಒಂದೇ ದಿನ 84,000ಕ್ಕೂ ಹೆಚ್ಚು ಕೊರೋನ ಧನಾತ್ಮಕ ಪ್ರಕರಣಗಳು ವಿಶ್ವದಾದ್ಯಂತ ವರದಿಯಾಗಿದ್ದು, ಒಟ್ಟು ಪ್ರಕರಣಗಳು 1.5 ಮಿಲಿಯನ್ ದಾಟಿದೆ.
ಕರೋನ ವೈರಸ್‌ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 88,502ರಷ್ಟಿದೆ. ನಿನ್ನೆ ಒಂದೇ ದಿನದಲ್ಲಿ ಅಮೆರಿಕಾದಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ -19 ಪ್ರಕರಣ ಅಂದರೆ 31,935 ಕರೋನ ವೈರಸ್ ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ. ಈಗಾಗಲೇ ಅಮೆರಿಕಾದಲ್ಲಿ 4,35,128 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು, ಮೃತರ ಸಂಖ್ಯೆ 14,795ಕ್ಕೆ ಏರಿಕೆಯಾಗಿದೆ.
ಸ್ಪೇನ್ನಲ್ಲಿ 148,220 ಪ್ರಕರಣಗಳು ಮತ್ತು 14,792 ಸಾವುಗಳು ವರದಿಯಾಗಿದೆ.
ಕೊರೋನ ಸೋಂಕಿನಿಂದಾಗಿ ಮ್ಯಾಡ್ರಿಡ್, ಬಾರ್ಸಿಲೋನಾ ಮತ್ತು ವೇಲೆನ್ಸಿಯಾದಂತಹ ನಗರಗಳು ಲಾಕ್‌ಡೌನ್ ಆಗಿವೆ. 1,39,422 ಪ್ರಕರಣಗಳಲ್ಲಿ ಇಟಲಿಯಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಕೊರೋನ ಸಾವುಗಳು ಅಂದರೆ 17,669 ಮಂದಿ ಮೃತಪಟ್ಟಿದ್ದಾರೆ.
ಪ್ರಾನ್ಸ್ ನಲ್ಲಿ ಕೊರೋನಾ ಸಾವಿನ ಸಂಖ್ಯೆ 10,869ಕ್ಕೆ ಹೆಚ್ಚಳವಾಗಿದ್ದು, ಇಂಗ್ಲೆಂಡ್ ನಲ್ಲಿ 7 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.
ಈಗಾಗಲೇ ಕೊರೋನ ಸೋಂಕಿತ 3,30,589 ಮಂದಿ ಗುಣಮುಖರಾಗಿ ವಿಶ್ವದ ವಿವಿಧೆಡೆಯಿಂದ ಮನೆಗೆ ಸೇರಿದ್ದಾರೆ.48 ಸಾವಿರಕ್ಕೂ ಅಧಿಕ ಮಂದಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.