ಮಲಯಾಳಂ ಹಾಸ್ಯ ನಟ ಶಶಿ ಕಳಿಂಗ ನಿಧನ

ಕೋಝಿಕ್ಕೋಡ್, ಎ.7: ರಂಗಭೂಮಿಯ ಜನಪ್ರಿಯ ನಟ, ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯ ನಟ ಶಶಿ ಕಳಿಂಗ ಅಲಿಯಾಸ್ ವಿ. ಚಂದ್ರಕುಮಾರ್ (59) ಮಂಗಳವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

2009ರಲ್ಲಿ ಬಿಡುಗಡೆಯಾದ ಕೇರಳ ಕೆಫೆ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. ಈ ವರೆಗೆ ಸುಮಾರು 30 ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದರು. 2010ರಲ್ಲಿ ಬಿಡುಗಡೆಯಾಗಿದ್ದ ‘‘ಪ್ರಾಂಚಿಯೆಟ್ಟನ್ ಆ್ಯಂಡ್ ದ ಸೈಂಟ್’’ ಸಿನಿಮಾದಲ್ಲಿ ಕಾಳಿಂಗ ನಟನೆ ಅತ್ಯುತ್ತಮವಾಗಿತ್ತು. ಈ ಸಿನಿಮಾದಲ್ಲಿ ಸೂಪರ್ ಸ್ಟಾರ್ ಮಮ್ಮುಟ್ಟಿ ಹೀರೋ ಆಗಿದ್ದರು. ಚಿಕ್ಕವಯಸ್ಸಿನಲ್ಲಿಯೇ ರಂಗಭೂಮಿಯಲ್ಲಿ ಹೆಚ್ಚು ಸಕ್ರಿಯವಾಗಿ ಭಾಗಿಯಾಗಿದ್ದರು.

Also Read  ಮಳೆಯ ಆರ್ಭಟದಿಂದಾಗಿ ತಾಜ್ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆ

ಮೃತರು ಪತ್ನಿ ಪ್ರಭಾವತಿ, ಪುತ್ರ ಚಂದ್ರಶೇಖರನ್ ನಾಯರ್, ಪುತ್ರಿ ಸುಕುಮಾರಿಯನ್ನು ಅಗಲಿದ್ದಾರೆ.

error: Content is protected !!
Scroll to Top