ಭಾರತದಲ್ಲಿ ಮುಂದುವರಿದ ಕೊರೋನ ರೌದ್ರನರ್ತನ: ಸೋಂಕಿತರ ಸಂಖ್ಯೆ 2301ಕ್ಕೆ ಏರಿಕೆ

ಹೊಸದಿಲ್ಲಿ, ಎ.3: ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡು ನಂತರ ವಿಶ್ವಾದ್ಯಂತ ಹರಡಿ ಸುಮಾರು 50ಸಾವಿರಕ್ಕೂ ಮಂದಿಯನ್ನು ಈವರೆಗೆ ಬಲಿ ಪಡೆದಿರುವ ಕೊರೋನ ವೈರಸ್ ಭಾರತದಲ್ಲಿ ತನ್ನ ರೌದ್ರ ನರ್ತನವನ್ನು ಮುಂದುವರಿಸಿದ್ದು, ಈವರೆಗೂ ಸೋಂಕಿತರ ಸಂಖ್ಯೆ 2,301ಕ್ಕೆ ಏರಿಕೆಯಾಗಿದೆ.

ಮಹಾಮಾರಿ ಕೊರೋನ ಈ ವರೆಗೂ ಓರ್ವ ವಲಸಿಗ ಸೇರಿದಂತೆ ಒಟ್ಟು 56 ಮಂದಿಯನ್ನು ಬಲಿಪಡೆದುಕೊಂಡಿದೆ. 2,301 ಮಂದಿಯಲ್ಲಿ ವೈರಸ್ ದೃಢಪಟ್ಟಿದ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜಸ್ತಾನ ಒಂದೇ ರಾಜ್ಯದಲ್ಲು ಶುಕ್ರವಾರ 14 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. 14 ಮಂದಿಯ ಪೈಕಿ 7 ಮಂದಿ ದೆಹಲಿಯ ನಿಝಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ಎಂದು ಹೇಳಲಾಗುತ್ತಿದೆ.

ಆಂಧ್ರಪ್ರದೇಶ ರಾಜ್ಯದಲ್ಲಿಯೂ 12 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ ಆ ರಾಜ್ಯದಲ್ಲಿ 161ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Also Read  ದೇಶದ ಜನತೆಗೆ ಬಹಿರಂಗ ಪತ್ರ ಬರೆದ ರಾಹುಲ್ ಗಾಂಧಿ…!! ➤ 500 ರೂ.ಗೆ ಗ್ಯಾಸ್ ಸಿಲಿಂಡರ್, ತೈಲ ಬೆಲೆ ಇಳಿಕೆ‌, ಹಲವು ವಿಚಾರಗಳು ಪತ್ರದಲ್ಲಿ ಉಲ್ಲೇಖ..

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಆತಂಕ ಒಂದೆಡೆಯಾದರೆ, ಮತ್ತೊಂದೆಡೆ ವೈರಸ್ ನಿಂದ ಗುಣಮುಖರಾಗುತ್ತಿರುವ ಸಂಖ್ಯೆ ಕೂಡ ದಿನ ಕಳೆದಂತೆ ಹೆಚ್ಚಾಗುತ್ತಿದೆ.

ರಾಜಸ್ತಾನ ರಾಜ್ಯದಲ್ಲಿ ಸೋಂಕಿಗೊಳಗಾಗಿದ್ದ ಇಬ್ಬರು ವ್ಯಕ್ತಿಗಳು ಇದೀಗ ಗುಣಮುಖರಾಗಿದ್ದಾರೆ. ಇದರಂತೆ ಭಿಲ್ವಾರದಲ್ಲಿ ಸೋಂಕಿಗೊಳಗಾಗಿದ್ದ 26 ಮಂದಿಯ ಪೈಕಿ 17 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಆಂಧ್ರಪ್ರದೇಶ ರಾಜ್ಯದಲ್ಲಿ ಸೋಂಕಿತ ವ್ಯಕ್ತಿಯೊಬ್ಬರು ವೈರಸ್ ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ಕಾಕಿನಾಡ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇವರು ವಿದೇಶದಿಂದ ಪ್ರಯಾಣ ಮಾಡಿದ್ದ ಹಿಸ್ಟರಿ ಹೊಂದಿದ್ದರು ಎಂದು ಹೇಳಲಾಗುತ್ತಿದೆ.

ಈ ನಡುವೆ ಒಡಿಶಾದಲ್ಲಿ ಮೊದಲ ಬಾರಿಗೆ ಸೋಂಕಿಗೊಲಗಾಗಿದ್ದ ವ್ಯಕ್ತಿ ಕೂಡ ಇದೀಗ ಚೇತರಿಸಿಕೊಂಡಿದ್ದು, ಪರೀಕ್ಷೆಯಲ್ಲಿ ವೈರಸ್ ಇಲ್ಲ ಎಂದು ತಿಳಿಸಲಾಗಿದೆ. ಶೀಘ್ರದಲ್ಲಿಯೇ ಈ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆಂದು ಹೇಳಲಾಗುತ್ತಿದೆ. ಪ್ರಸ್ತುತ ರಾಜ್ಯಲ್ಲಿ ಇನ್ನೂ ಮೂವರಲ್ಲಿ ವೈರಸ್ ಪತ್ತೆಯಾಗಿದೆ ಎಂದು ಅಲ್ಲಿನ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Also Read  ಕಾಸರಗೋಡು: ಸೀಮೆಎಣ್ಣೆ ಸೇವಿಸಿ ಮಗು ಮೃತ್ಯು

ಇನ್ನು ಕರ್ನಾಟಕದಲ್ಲಿ ಈವರೆಗೆ ಒಟ್ಟು 125 ಪ್ರಕರಣಗಳು ಖಚಿತವಾಗಿದ್ದು, 3 ಸಾವಿನ ಪ್ರಕರಣ ದಾಖಲಾಗಿದೆ. ಕೊರೋನ ಮಹಾಮಾರಿಗೆ ದೇಶದಲ್ಲಿ ಈವರೆಗೆ 56 ಮಂದಿ ಸಾವನ್ನಪ್ಪಿದ್ದಾರೆ.

error: Content is protected !!
Scroll to Top