ಕೋರ್ಟ್ ಗೆ ಹೋಗಿದ್ದ ತನ್ನನ್ನು ನಿಝಾಮುದ್ದೀನ್ ಪ್ರಕರಣಕ್ಕೆ ತಳುಕು ಹಾಕಬೇಡಿ ➤ ಉಪ್ಪಿನಂಗಡಿಯ ವಕೀಲರಿಂದ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.01. ದೆಹಲಿಯ ನಿಝಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಉಪ್ಪಿನಂಗಡಿಯ ವ್ಯಕ್ತಿ ಭಾಗವಹಿಸಿದ ಬಗ್ಗೆ ಪ್ರಕಟವಾಗುತ್ತಿರುವ ವರದಿಯ ಬಗ್ಗೆ ಸ್ವತಃ ವಕೀಲರಾಗಿರುವ ಶಂಕಿತ ವ್ಯಕ್ತಿಯೇ ಸ್ಪಷ್ಟನೆ ನೀಡಿದ್ದು, ಮಾಧ್ಯಮದ ವರದಿಯು ಕಪೋಲಕಲ್ಪಿತವಾಗಿದೆ ಎಂದಿದ್ದಾರೆ.

ತಾನು ನ್ಯಾಯವಾದಿಯಾಗಿದ್ದು ಸುಪ್ರಿಂಕೋರ್ಟ್ ನಲ್ಲಿ ವ್ಯವಹರಿಸುವ ಸಲುವಾಗಿ ದೆಹಲಿಗೆ ಹೋಗಿದ್ದು, ಅಲ್ಲಿ ಕೊರೋನಾ ತಪಾಸಣೆ ನಡೆಸುವ ದೃಶ್ಯದಲ್ಲಿ ತನ್ನ ಪೋಟೋ ಇದ್ದು ಹಿಂದಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಕಳೆದ ಹನ್ನೆರಡು ದಿನಗಳ ಹಿಂದೆ ದೆಹಲಿಯಿಂದ ವಿಮಾನ ಮೂಲಕ ಬೆಂಗಳೂರಿಗೆ ಹಿಂತಿರುಗಿದ ಕಾರಣಕ್ಕಾಗಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ತನನ್ನು ವಶಕ್ಕೆ ತೆಗೆದುಕೊಂಡು ವೈದ್ಯಕೀಯ ನಿಗಾದಲ್ಲಿ ಇರಿಸಿದ್ದಾರೆಯೇ ವಿನಃ ಯಾವುದೇ ಮತೀಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರಣಕ್ಕಾಗಲೀ, ನಿಝಾಮುದ್ದೀನ್ ಮಸೀದಿಗೆ ಹೋಗಿದ್ದೇನೆಂಬ ಕಾರಣಕ್ಕಾಗಿ ಅಲ್ಲ. ದಯವಿಟ್ಟು ಸುಪ್ರಿಂ ಕೋರ್ಟ್ ಗೆ ಹೋಗಿದ್ದ ನನ್ನನ್ನು ನಿಜಾಮುದ್ದೀನ್ ಪ್ರಕರಣಕ್ಕೆ ತಲುಕು ಹಾಕಬಾರದಾಗಿ ವಿನಂತಿಸಿದ್ದಾರೆ.

Also Read  ಬಾಲಿವುಡ್ ನಟಿ ಝರೀನಾ ನಿಧನ

error: Content is protected !!
Scroll to Top