ಮೂರು ತಿಂಗಳುಗಳ ಕಾಲ ಸಾಲದ ಕಂತು ಮುಂದೂಡಿಕೆ ➤ ಆರ್ ಬಿಐ ಗವರ್ನರ್ ಮಹತ್ವದ ಆದೇಶ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಮಾ.27. ಎಲ್ಲಾ ಬ್ಯಾಂಕ್ ಗಳ ಸಾಲದ ಕಂತುಗಳನ್ನು ಮೂರು ತಿಂಗಳುಗಳ ಕಾಲ ಮುಂದೂಡಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿ ಕಾಂತ್ ದಾಸ್ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದ ಅವರು ವೈಯಕ್ತಿಕ ಸಾಲ, ಗೃಹ ಸಾಲ, ವಾಹನಗಳ ಸಾಲಗಳ ಕಂತುಗಳನ್ನು ಜೂನ್ ತನಕ ಮೂಂದೂಡಲಾಗಿದೆ. ರಾಷ್ಟ್ರೀಕೃತ, ಸಹಕಾರಿ , ಗ್ರಾಮೀಣ ಬ್ಯಾಂಕ್ ಗಳು ಸೇರಿದಂತೆ ಇದು ಎಲ್ಲ ಬ್ಯಾಂಕ್ ಗಳಿಗೂ ಅನ್ವಯವಾಗುತ್ತದೆ ಎಂದರು. ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಈಗಿನ ಆರ್ಥಿಕ ಸ್ಥಿತಿಯನ್ನು ಗಮನಿಸುತ್ತಿದ್ದು, ಬ್ಯಾಂಕ್ ಗಳ ಸಾಲದ ಮೇಲಿನ ಬಡ್ಡಿ ದರವನ್ನು ಕಡಿತ ಮಾಡಲಾಗಿದೆ. ರೆಪೋ ದರವನ್ನು 5.15ರಿಂದ 4.4ಕ್ಕೆ ಇಳಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Also Read  ಶಬರಿಮಲೆ ದರ್ಶನ ಮುಗಿಸಿ ಬರುತ್ತಿದ್ದ ವೇಳೆ ಬಸ್‌ ಪಲ್ಟಿ    ➤ 20ಕ್ಕೂ ಅಧಿಕ ಮಂದಿಗೆ ಗಾಯ

error: Content is protected !!
Scroll to Top