ದೇಶದಲ್ಲಿ ಕೊರೋನ ಸೋಂಕಿಗೆ ಮತ್ತೊಂದು ಬಲಿ: ಮೃತರ ಸಂಖ್ಯೆ 9ಕ್ಕೆ ಏರಿಕೆ

ಕೋಲ್ಕತ್ತಾ, ಮಾ.23: ಕೊರೋನ ವೈರಸ್‌ಗೆ ದೇಶದಲ್ಲಿ ಮತ್ತೊಂದು ಬಲಿಯಾಗಿದೆ. ಕೋಲ್ಕತ್ತಾದ ಕೊರೋನ ಸೋಂಕಿತ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾರೆ.

ಇತ್ತೀಚೆಗೆ ಇಟಲಿಯಿಂದ ಬಂದಿದ್ದ 55 ವರ್ಷದ ವ್ಯಕ್ತಿಯೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೊರೋನ ಸೋಂಕಿನ ಕಾರಣದಿಂದ ಪಶ್ಚಿಮ ಬಂಗಾಳದಲ್ಲಿ ನಡೆದ ಮೊದಲ ಸಾವು ಪ್ರಕರಣವಾಗಿದ್ದು, ದೇಶದ 9ನೇ ಪ್ರಕರಣವಾಗಿದೆ. 55 ವರ್ಷದ ವ್ಯಕ್ತಿಯ ಕುಟುಂಬ ಇತ್ತೀಚೆಗೆ ಇಟಲಿಯಿಂದ ಕೋಲ್ಕತ್ತಾಗೆ ಬಂದಿಳಿದಿತ್ತು. ಆದರೆ ಅವರ ಮಗ ಇನ್ನೂ ಇಟಲಿಯಲ್ಲೇ ಉಳಿದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಇದುವರೆಗೆ 415 ಪ್ರಕರಣಗಳು ದೃಢವಾಗಿದ್ದು, ಅವುಗಳಲ್ಲಿ 23 ಜನರು ಗುಣಮುಖರಾಗಿ ಮನೆಸೇರಿದ್ದಾರೆ.

Also Read  ಇನ್ನುಮುಂದೆ ಚುನಾವಣಾ ಕರ್ತವ್ಯ ಸಿಬ್ಬಂದಿಗಳಿಗೆ ಬೂತಲ್ಲೇ ಅಂಚೆ ಮತದಾನ

error: Content is protected !!
Scroll to Top