ಕಾಸರಗೋಡಿನಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ➤ ಆತಂಕದಲ್ಲಿ ಗಡಿ ಭಾಗವಾದ ಪುತ್ತೂರು, ಸುಳ್ಯದ ಜನತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.22. ನೆರೆ ರಾಜ್ಯವಾದ ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದ್ದು, ಕಾಸರಗೋಡು ಜಿಲ್ಲೆಯೊಂದರಲ್ಲೇ ಭಾನುವಾರದಂದು ಐವರಲ್ಲಿ ಸೋಂಕು ದೃಢಪಟ್ಟಿದೆ.

ಕಾಸರಗೋಡು ಜಿಲ್ಲೆಯು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿರುವುದರಿಂದ ಗಡಿ ಭಾಗವಾದ ಪುತ್ತೂರು, ಸುಳ್ಯ ಭಾಗದ ನಿವಾಸಿಗಳಲ್ಲಿ ಕೊರೋನಾ ಭೀತಿ ಶುರುವಾಗಿದೆ. ಇದೀಗ ಮಂಗಳೂರಿನಲ್ಲೂ ಕೊರೋನಾ ಪತ್ತೆಯಾಗಿರುವುದರಿಂದ ಗಡಿ ಭಾಗದ ಜನತೆಯಲ್ಲಿ ಆತಂಕ ಮನೆಮಾಡಿದೆ. ಕಾಸರಗೋಡಿನಲ್ಲಿ ಕೊರೋನ ವೈರಸ್ ಪತ್ತೆಯಾಗಿರುವುದರಿಂದ ದಕ್ಷಿಣ ಕನ್ನಡಕ್ಕೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕೇರಳದ ಗಡಿಭಾಗದಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಹೊರಡಿಸಿದ್ದರು‌. ಕರಾವಳಿಯಿಂದ ಕೇರಳವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದ್ದು, ತುರ್ತು ‌ಸಂದರ್ಭದಲ್ಲಿ ತಲಪಾಡಿ ಚೆಕ್‌ಪೋಸ್ಟ್ ಮೂಲಕ‌ ವೈದ್ಯರ ತಂಡದ ತಪಾಸಣೆಯೊಂದಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು.

Also Read  ಶೌಚಾಗಾರ ಹಾಗೂ ನೀರಿನ ಟ್ಯಾಂಕ್ ನಲ್ಲಿ ಮಹಿಳೆಯ ಕೊಳೆತ ಶವ ಪತ್ತೆ ➤ 22 ವರ್ಷದ ಪುತ್ರಿಯ ಬಂಧನ

error: Content is protected !!
Scroll to Top