ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್‌ಗೆ ಕೊರೋನ ಪಾಸಿಟಿವ್

ಮುಂಬೈ, ಮಾ.20: ಬಾಲಿವುಡ್‌ನ ಪ್ರಸಿದ್ದ ಗಾಯಕಿ ಕನ್ನಿಕಾ ಕಪೂರ್ ಇತ್ತೀಚೆಗೆ ಇಂಗ್ಲೆಂಡಿನಿಂದ ಮರಳಿದ್ದು, ಅವರಿಗೆ ಕೊರೋನ ಸೋಂಕು ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ.
ಸದ್ಯ ಗಾಯಕಿ ಕನ್ನಿಕಾರನ್ನು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾನಿಲಯದ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕನ್ನಿಕಾ ಅವರು ಮ.15ರಂದು ಲಂಡನ್‌ನಿಂದ ಲಕ್ನೋಗೆ ಮರಳಿದ್ದರು ಎನ್ನಲಾಗಿದೆ. ಶುಕ್ರವಾರ ಮಧ್ಯಾಹ್ನದವರೆಗಿನ ಮಾಹಿತಿ ಪ್ರಕಾರ, ಭಾರತದಲ್ಲಿ 194 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ 20 ಜನರು ಗುಣಮುಖರಾಗಿದ್ದು, 170 ಜನರು ಚಿಕಿತ್ಸೆ ಪಡೆಯುತ್ತಿದ್ಧಾರೆ. ನಾಲ್ವರು ಮೃತಪಟ್ಟಿದ್ಧಾರೆ ಎಂದು ತಿಳಿದುಬಂದಿದೆ.

Also Read  ಯೂಟ್ಯೂಬರ್‌ ಮೇಲೆ ಐಟಿ ದಾಳಿ- 24 ಲಕ್ಷ ರೂ. ನಗದು ಪತ್ತೆ

error: Content is protected !!
Scroll to Top