ಜೋಧ್‌ಪುರ: ಭೀಕರ ರಸ್ತೆ ಅಪಘಾತಕ್ಕೆ 11 ಮಂದಿ ಬಲಿ

ಜೋಧ್‌ಪುರ, ಮಾ.14: ಜೀಪ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿಗಳು ಸೇರಿ 11 ಮಂದಿ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ರಾಜಸ್ತಾನದ ಜೋಧ್ಪುರ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ.

ಮೃತರಲ್ಲಿ 6 ಮಹಿಳೆಯರು, 1 ಮಗು ಹಾಗೂ 4 ಮಂದಿ ಪುರುಷರು ಸೇರಿದ್ದು ಇದರಲ್ಲಿ ಕಳೆದ ಫೆಬ್ರವರಿ 27ರಂದು ಮದುವೆಯಾದ ನವ ಜೋಡಿಗಳು ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಬಲೋತ್ರ ಗ್ರಾಮದ ನಿವಾಸಿಗಳು ರಾಮ ದೇವೋರ್ ಪ್ರದೇಶದಲ್ಲಿರುವ ರಾಮದೇವೋ ದೇವರಿಗೆ ಪೂಜೆ ಸಲ್ಲಿಸಲು ಕುಟುಂಬ ಸಮೇತ ಜೀಪಿನಲ್ಲಿ ಹೊರಟಿದ್ದು ಬಲೋತ್ರಪಲೋಡಿ ರಾಷ್ಟ್ರೀಯ ಹೆದ್ದಾರಿ ತಲುಪುತಿದ್ದಂತೆ ಟ್ರಕ್‌ಜೀಪಿನ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸೇಗರ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೂವರನ್ನು ಜೋಧ್ಪುರ ಆಸ್ಪತ್ರೆೆ ದಾಖಲಿಸಲಾಗಿದೆ.

Also Read  ಭಾರೀ ಮಳೆ ಹಿನ್ನೆಲೆ- ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ರಜೆ ➤ ಜಿಲ್ಲಾಧಿಕಾರಿ

 

error: Content is protected !!
Scroll to Top