ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಭಾರೀ ಇಳಿಕೆ

ಹೊಸದಿಲ್ಲಿ, ಮಾ.11: ವಿಶ್ವಾದ್ಯಂತ ಕೊರೊನಾ ವೈರಸ್ ಪ್ರಭಾವ, ಸೌದಿ-ರಷ್ಯಾ ತೈಲ ದರ ಸಮರದ ಕಾರಣದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಭಾರೀ ಕುಸಿತದ ಪರಿಣಾಮದಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳಲ್ಲಿ ಭಾರೀ ಇಳಿಕೆ ಉಂಟಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರದಲ್ಲಿ 2.69 ರೂಪಾಯಿಗಳಷ್ಟು ಇಳಿಕೆಯಾಗಿದ್ದು ಡಿಸೇಲ್ ದರ 2.33 ರೂಪಾಯಿಗಳಷ್ಟು ಇಳಿದಿದೆ. ಬುಧವಾರದಂದು ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತೀ ಲೀಟರ್ ಗೆ 70.29 ಇದ್ದರೆ ಡಿಸೇಲ್ ದರ ಪ್ರತೀ ಲೀಟರ್ ಗೆ 63.01 ರೂಪಾಯಿಗಳಾಗಿತ್ತು.

Also Read  ಮೂವರು ಉಗ್ರರನ್ನು ಸದೆಬಡಿದ ಭಾರತೀಯ ಸೇನೆ

error: Content is protected !!
Scroll to Top