ತೆಲಂಗಾಣ: ಮರ್ಯಾದ ಹತ್ಯೆ ಪ್ರಕರಣದ ಆರೋಪಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಹೊಸದಿಲ್ಲಿ,  ಮಾ.8: ದೇಶವನ್ನೇ ಬೆಚ್ಚಿಬೀಳಿಸಿದ 2018ರ ತೆಲಂಗಾಣದ ಮರ್ಯಾದೆಗೇಡು ಹತ್ಯೆ ಪ್ರಕರಣದ ಆರೋಪಿ, ಯುವತಿಯ ತಂದೆ ಮಾರುತಿ ರಾವ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.

2018ರಲ್ಲಿ ತನ್ನ ಪುತ್ರಿಯನ್ನು ಪ್ರೀತಿಸಿ ಮದುವೆಯಾದ ಪ್ರಣಯ್ ಪೆರುಮಳ್ಳ ಎಂಬ ಯುವಕನನ್ನು ಮಾರುತಿ ರಾವ್ ಸುಪಾರಿ ನೀಡಿ ಕೊಲೆ ಮಾಡಿಸಿದ್ದರು. ಪ್ರಣಯ್ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದರೆ, ಅಮೃತಾ ಮೇಲ್ಜಾತಿಗೆ ಸೇರಿದ ಯುವತಿಯಾಗಿದ್ದಳು.

2018ರ ಸೆಪ್ಟಂಬರ್ 14ರಂದು ಮಾರುತಿ ರಾವ್ 1 ಕೋಟಿ ರೂ. ಸುಪಾರಿ ನೀಡಿ ಪ್ರಣಯ್ ನನ್ನು ಕೊಲೆ ಮಾಡಿಸಿದ್ದ ಎಂದು ಪೊಲೀಸರು ಆರೋಪಿಸಿದ್ದರು. ಅಮೃತಾ, ಪ್ರಣಯ್ ಮತ್ತು ಆತನ ತಾಯಿ ಆಸ್ಪತ್ರೆಯಿಂದ ಹಿಂದಿರುಗುವಾಗ ಹಾಡಹಗಲೇ ಕೊಚ್ಚಿ ಕೊಲೆಗೈಯಲಾಗಿತ್ತು. ಆ ಸಮಯ ಅಮೃತಾ ಗರ್ಭಿಣಿಯಾಗಿದ್ದರು.

Also Read  ಸತತ ಮಳೆಯಿಂದಾಗಿ ಧರೆಗುರುಳಿದ ಬೃಹತ್ ಮರ

error: Content is protected !!
Scroll to Top