ಭಾರತದಲ್ಲಿ 28 ಜನರಿಗೆ ಕೊರೋನ ದೃಢ

ಹೊಸದಿಲ್ಲಿ, ಮಾ.5: ಡೆಡ್ಲಿ ಕೊರೋನ ವೈರಸ್ ಭಾರತದಲ್ಲಿ ತನ್ನ ಕಬಂದಬಾಹುವನ್ನು ಚಾಚುತ್ತಿದ್ದು, ಇದುವರೆಗೆ 28 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.

ಭಾರತದ ಪ್ರವಾಸಕ್ಕೆ ಬಂದಿರುವ 16 ಮಂದಿ ಇಟಲಿ ಪ್ರವಾಸಿಗರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಜೈಪುರಕ್ಕೆ ಪ್ರವಾಸಕ್ಕೆ ಬಂದಿರುವ ಇಟಲಿ ಮಹಿಳೆಯೋರ್ವರಿಗೆ ಮಂಗಳವಾರ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು.

ದಿಲ್ಲಿಯ ಓರ್ವ ಪ್ರಜೆಗೆ ಸೋಂಕು ತಗುಲಿದ್ದು, ಆತನ ಸಂಪರ್ಕಕ್ಕೆ ಬಂದಿದ್ದ ಆಗ್ರಾದ ಒಂದು ಕುಟುಂಬದ ಸದಸ್ಯರಿಗೆ ಕೊರೋನ ಸೋಂಕು ಖಚಿತವಾಗಿದೆ. ಕುಟುಂಬದ ಆರು ಜನರಿಗೆ ಸೋಂಕು ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಮೊದಲ ಹಂತದಲ್ಲಿ 15 ಪರೀಕ್ಷಾ ಲ್ಯಾಬ್‌ಗಳನ್ನು ನಿರ್ಮಿಸಲಾಗಿದೆ. ಇನ್ನೂ 19 ಲ್ಯಾಬ್‌ಗಳನ್ನು ನಿರ್ಮಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

Also Read  ಮೀನು ಮುಟ್ಟಿದ ಬಳಿಕ ಕೈ ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿ ➤ ವೈದ್ಯರ ಮಾತು ಕೇಳಿ ಕುಸಿದುಬಿದ್ದ!

error: Content is protected !!
Scroll to Top