ಬಾಲಕಿಯ ಅತ್ಯಾಚಾರ: ಕೇರಳ ಪಾದ್ರಿಯನ್ನು ಉಚ್ಛಾಟಿಸಿದ ಪೋಪ್

ತಿರುವನಂತಪುರಂ, ಮಾ.1: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಜೈಲುಪಾಲಗಿರುವ ಕೇರಳದ ಪಾದ್ರಿಯನ್ನು ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಉಚ್ಛಾಟಿಸಿರುವುದಾಗಿ ಚರ್ಚ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಇಲ್ಲಿನ ಮನಾಂತವಾದಿ ಡಯೋಸಿಸ್ ನಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಪೋಕ್ಸೋ ನ್ಯಾಯಾಲಯದಲ್ಲಿ ಸಾಬೀತುಗೊಂಡು ಇದೀಗ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಸಿರಿಯೋ-ಮಲಬಾರ್ ಚರ್ಚ್ ಧರ್ಮಗುರು ರಾಬಿನ್ ವಡಕ್ಕುಂಶ್ಯೇರಿ ಅವರೇ ವ್ಯಾಟಿಕನ್ ನಿಂದ ಉಚ್ಛಾಟನೆಗೊಳಗಾದವರಾಗಿದ್ದಾರೆ.

2017ರಲ್ಲಿ ಈ ಪ್ರಕರಣ ಬೆಳಕಿಗೆ ಬಂದ ದಿನದಂದೇ ರಾಬಿನ್ ಅವರನ್ನು ಧರ್ಮಗುರು ಕರ್ತವ್ಯದಿಂದ ವಜಾಗೊಳಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ತಲಶ್ಯೇರಿಯ ಪೋಕ್ಸೊ ನ್ಯಾಯಾಲಯವು ಕಳೆದ ವರ್ಷವಷ್ಟೇ ರಾಬಿನ್ ವಡಕ್ಕುಂಶ್ಯೇರಿ ಅವರಿಗೆ 20 ವರ್ಷದ ಕಠಿಣ ಸೆರೆವಾಸ ಶಿಕ್ಷೆ ಹಾಗೂ 3 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿತ್ತು.

Also Read  ಹತ್ರಾಸ್ ಅತ್ಯಾಚಾರ ಪ್ರಕರಣ ➤ ಹತ್ರಾಸ್ ಎಸ್‌ಪಿ ಸೇರಿ ,ನಾಲ್ವರು ಪೊಲೀಸರ ಅಮಾನತು

error: Content is protected !!
Scroll to Top