ಮುಂದಿನ ತಿಂಗಳು ಎಲ್‌ಪಿಜಿ ದರದಲ್ಲಿ ಇಳಿಕೆ: ಸಚಿವ ಪ್ರಧಾನ್

ರಾಂಚಿ, ಫೆ.20: ಮುಂದಿನ ತಿಂಗಳು ಎಲ್‌ಪಿಜಿ ಸಿಲಿಂಡರ್ ಬೆಲೆ ಕಡಿಮೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಸಿದ್ದಾರೆ.
ಜಾರ್ಖಂಡ್ ಪ್ರವಾಸದಲ್ಲಿರುವ ಅವರು ಇಲ್ಲಿನ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಎಲ್‌ಪಿಜಿ ಸಿಲಿಂಡರ್ ಬೆಲೆಗಳ ನಿರಂತರ ಏರಿಕೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಪ್ರಧಾನ್, ಎಲ್‌ಪಿಜಿ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ ಎಂಬುದು ವಾಸ್ತವಿಕವಾಗಿ ನಿಜವಲ್ಲ. ಈ ತಿಂಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಾರಣ ದರ ಹೆಚ್ಚಾಗಿದೆ ಆದರೆ ಮುಂದಿನ ದಿನಗಳಲ್ಲಿ ಬೆಲೆಗಳು ಖಂಡಿತವಾಗಿ ಕಡೆಮೆಯಾಗಲಿದೆ ಎಂಬ ಸುಳಿವು ನೀಡಿದರು.

Also Read  ನಿಗೂಢ ಕಾಯಿಲೆಗೆ ಒಂದೇ ತಿಂಗಳಲ್ಲಿ 17 ಮಕ್ಕಳು ಬಲಿ..!

ಚಳಿಗಾಲದಲ್ಲಿ, ಎಲ್ಪಿಜಿ ಬಳಕೆ ಹೆಚ್ಚಾಗುತ್ತದೆ, ಇದು ವಲಯದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಈ ತಿಂಗಳು ಬೆಲೆ ಏರಿಕೆಯಾದರೆ ಮುಂದಿನ ತಿಂಗಳು ಕಡಿಮೆಯಾಗಲಿದೆ ಎಂದರು.
ಕಳೆದ ವಾರ, ಅಡುಗೆ ಅನಿಲ ಎಲ್‌ಪಿಜಿ ಬೆಲೆಯನ್ನು ಸಿಲಿಂಡರ್‌ಗೆ 146.ರೂಪಾಯಿ ಏರಿಸಲಾಗಿತ್ತು ಇದಕ್ಕೆ ಸಾರ್ವಜನಿಕ ವಲಯದಲ್ಲೂ ಭಾರಿ ಆಕ್ರೋಶ ಸಹ ವ್ಯಕ್ತವಾಗಿತ್ತು.

error: Content is protected !!
Scroll to Top