ಬೆಂಗಳೂರಿಗೆ ತೆರಳುತ್ತಿದ್ದ ಗೋ ಏರ್ ವಿಮಾನದಲ್ಲಿ ಬೆಂಕಿ: ಅಪಾಯದಿಂದ ಪಾರು

ಬೆಂಗಳೂರು, ಫೆ.18: ಬೆಂಗಳೂರಿಗೆ ಹೊರಟಿದ್ದ ಗೋ ಏರ್ ವಿಮಾನ ಟೇಕಾಫ್ ಸಂದರ್ಭ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಪರಿಣಾಮ ಆತಂಕದ ಸನ್ನಿವೇಶ ನಿರ್ಮಾಣವಾದ ಘಟನೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ.

ಘಟನೆ ನಡೆಯುತ್ತಿದ್ದಂತೆ ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ವಿಮಾನದಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

‘ಅಹಮದಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಗೋಏರ್ ವಿಮಾನ ‘ಜಿ8 802’ರ ಬಲಭಾಗದ ಎಂಜಿನ್‌ಗೆ ಟೇಕ್‌ಆಫ್ ವೇಳೆ ಅನ್ಯವಸ್ತು ಡಿಕ್ಕಿಯಾದ ಅನುಮಾನವಿದೆ. ಡಿಕ್ಕಿಯ ಪರಿಣಾಮವಾಗಿ ಸಣ್ಣದಾಗಿ ಬೆಂಕಿ ಹೊತ್ತಿಕೊಂಡಿದೆ. ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ’ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

Also Read  ಬೆಳ್ತಂಗಡಿ: ನೀರಿನಲ್ಲಿ ಮುಳುಗಿ ಯುವಕ ಮೃತ್ಯು

ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ. ಪ್ರಯಾಣಿಕರಿಗಾದ ಅನನುಕೂಲಕ್ಕಾಗಿ ವಿಷಾದಿಸುತ್ತೇವೆ’ ಎಂದೂ ಗೋಏರ್ ಹೇಳಿದೆ.

error: Content is protected !!
Scroll to Top