ಉತ್ತರಪ್ರದೇಶ: ಭೀಕರ ಅಪಘಾತಕ್ಕೆ 13 ಮಂದಿ ಬಲಿ, 31 ಮಂದಿಗೆ ಗಾಯ

ಉತ್ತರಪ್ರದೇಶ, ಫೆ.13: ಟ್ರಕ್ಕೊಂದು ಬಸ್ ಢಿಕ್ಕಿ ಹೊಡೆದ ಪರಿಣಾಮ 13 ಮಂದಿ ದಾರುಣವಾಗಿ ಮೃತಪಟ್ಟು 31 ಜನರು ಗಂಭೀರ ಗಾಯಗೊಂಡ ಘಟನೆ ಆಗ್ರಾ -ಲಕ್ನೋ ಹೆದ್ದಾರಿಯ ಫಿರೋಝಾಬಾದ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಬುಧವಾರ ರಾತ್ರಿ 10 ಗಂಟೆಯ ವೇಳೆ ಈ ಭೀಕರ ಅಪಘಾತ ಸಂಭವಿಸಿದ್ದು  ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ, ದೆಹಲಿಯಿಂದ ಮೊತಿರಿಗೆ (ಬಿಹಾರ) ಹೋಗುತ್ತಿದ್ದ ಸ್ಲೀಪರ್ ಬಸ್ ಗೆ ಹಿಂದಿನಿಂದ ಬಂದ ಕಂಟೇನರ್ ಟ್ರಕ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು ಎಂದು ಪೊಲೀಸ್ ವರಿಷ್ಠಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ. ನಗ್ಲಾ ಖಂಗಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

Also Read  ಅಪ್ರಾಪ್ತ ಬಾಲಕಿಯ ಸಮ್ಮತಿಯ ಲೈಂಗಿಕತೆ ಅತ್ಯಾಚಾರವಲ್ಲ- ಹೈಕೋರ್ಟ್

ಈ ಕುರಿತು ಸೈಫೈ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ವೈಧ್ಯಾಧಿಕಾರಿ ಡಾ. ವಿಶ್ವ ದೀಪಕ್ ಮಾತನಾಡಿ, 13 ಜನರು  ಸಾವನ್ನಪ್ಪಿದ್ದು 31 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.

ಬಸ್ ನಲ್ಲಿ 40 ರಿಂದ 45 ಪ್ರಯಾಣಿಕರು ಇದ್ದರು. ಆನೇಕರು ಇದರಲ್ಲಿ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ

error: Content is protected !!
Scroll to Top