ತುರ್ತು ಭೂಸ್ಪರ್ಶದ ವೇಳೆ ಸ್ಕಿಡ್ ಆಗಿ ತುಂಡಾದ ವಿಮಾನ ➤ ಮೂವರು ಮೃತ್ಯು, 179 ಜನರಿಗೆ ಗಾಯ

(ನ್ಯೂಸ್ ಕಡಬ) newskadaba.com, ಇಸ್ತಾನ್ ಬುಲ್, ಫೆ.6. ಪಶ್ಚಿಮ ಟರ್ಕಿಯ ಅಜ್ಮೀರ್ ನಿಂದ ಇಸ್ತಾನ್ ಬುಲ್ ನ ಸಬಿಹಾ ಗೋಕ್ಸೆನ್ ನಿಲ್ದಾಣಕ್ಕೆ ಬರುತ್ತಿದ್ದ 183 ಪ್ರಯಾಣಿಕರನ್ನು ಹೊತ್ತ ವಿಮಾನವೊಂದು ರನ್ ವೇಯಲ್ಲಿ ಸ್ಕಿಡ್ ಆದ ಪರಿಣಾಮ ತುಂಡು ತುಂಡಾಗಿ ಮೂವರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಹವಾಮಾನ ವೈಪರೀತ್ಯದ ಕಾರಣದಿಂದ ತುರ್ತು ಭೂ ಸ್ಪರ್ಶ ಮಾಡುವಾಗ ವೇ ಯಲ್ಲಿ ತೇವಾಂಶ ಹೆಚ್ಚಿದ್ದರಿಂದ ವಿಮಾನ ಸ್ಕಿಡ್ ಆಗಿ ಇಬ್ಬಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಮೂವರು ಮೃತಪಟ್ಟು, 179 ಜನರು ಗಾಯಗೊಂಡಿದ್ದಾರೆಂದು ಆರೋಗ್ಯ ಅಧಿಕಾರಿ ಫಹರೆಟಿನ್ ಕೋಖಾ ತಿಳಿಸಿದ್ದಾರೆಂದು ವರದಿಯಾಗಿದೆ. ವಿಮಾನದಲ್ಲಿ 177 ಪ್ರಯಾಣಿಕರು ಸಿಬ್ಬಂದಿ ಸೇರಿದಂತೆ 6 ಮಂದಿ ಸಿಬ್ಬಂದಿಗಳಿದ್ದರು. ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Also Read  ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆಯಲ್ಲಿ ಭಾರೀ ಇಳಿಕೆ ➤ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರಕಾರ

error: Content is protected !!
Scroll to Top