ಶ್ರೀನಗರ, ಜ.15: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ವಿಧಿ ರದ್ದು ಬಳಿಕ ರದ್ದುಗೊಳಿಸಲಾಗಿದ್ದ ಮೊಬೈಲ್ ಇಂಟರ್ನೆಟ್ ಸೇವೆ, ಬ್ರಾಡ್ ಬ್ಯಾಂಡ್ ಸೇವೆಗಳನ್ನು ಹಲವೆಡೆ ಭಾಗಶಃ ಪುನರಾರಂಭಿಸಲಾಗಿದೆ.

ಹೋಟೆಲ್, ಟ್ರಾವೆಲ್ ಸಂಸ್ಥೆಗಳು ಆಸ್ಪತ್ರೆಗಳಿಗೆ ಅನ್ವಯಿಸಿ ಜಮ್ಮುವಿನ ಹಲವು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಪುನರಾರಂಭಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಗೃಹ ಸಚಿವಾಲಯ ಆದೇಶ ಹೊರಡಿಸಿದ್ದು, ಕಾಶ್ಮೀರ ವಿಭಾಗದಲ್ಲಿ 400 ಇಂಟರ್ನೆಟ್ ಕಿಯೋಸ್ಕ್ ಗಳನ್ನು ಸ್ಥಾಪಿಸಲಾಗುವುದು. ಅಗತ್ಯ ವಸ್ತುಗಳ ಒದಗಿಸುವ ಸಂಸ್ಥೆಗಳು, ಆಸ್ಪತ್ರೆ, ಬ್ಯಾಂಕ್ ಮತ್ತು ಸರ್ಕಾರಿ ಕಚೇರಿಗಳಿಗೆ ಅನ್ವಯವಾಗುವಂತೆ ಬ್ರಾಡ್ ಬ್ಯಾಂಡ್ ಸೇವೆಯನ್ನು ಇಂಟರ್ನೆಟ್ ಸೇವಾ ಸಂಸ್ಥೆಗಳು ಒದಗಿಸಲಿವೆ ಎಂದು ತಿಳಿಸಿದೆ.

Also Read  ಉಪ್ಪಳ: ಕರ್ನಾಟಕ ನೋಂದಣಿಯ ಕಾರಿನಲ್ಲಿ 19 ರ ಹರೆಯದ ಯುವತಿಯ ಅಪಹರಣ ➤ ಆಕ್ರೋಶದಿಂದ ಕಾರನ್ನು ಅಡ್ಡಗಟ್ಟಿ ಧ್ವಂಸಗೈದು ಯುವತಿಯನ್ನು ರಕ್ಷಿಸಿದ ಊರವರು ➤ ಪೊಲೀಸರಿಂದ ಲಾಠಿ ಚಾರ್ಜ್ - ಉಪ್ಪಳ ಉದ್ವಿಗ್ನ

ಪೋಸ್ಟ್ ಪೇಡ್ ಮೊಬೈಲ್ ಗಳಿಗೆ 2ಜಿ ಸಂಪರ್ಕವನ್ನು ನೀಡಲಾಗಿದ್ದು, ಜಮ್ಮು, ಸಾಬಾ, ಕತುವಾ, ಉಧಂಪುರ ಮತ್ತು ರಿಯಾಸಿ ಸೇರಿದಂತೆ ಜಮ್ಮುವಿನ ಹಲವು ಪ್ರದೇಶಗಳಲ್ಲಿ ಇ ಬ್ಯಾಂಕಿಂಗ್ ಸೇವೆಗಳಿಗೆ ಅವಕಾಶ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.