ವಿದ್ಯಾಭಾರತಿ ಅಖಿಲ ಭಾರತ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ ► ಕಡಬ ಸರಸ್ವತೀ ವಿದ್ಯಾಲಯ ತಂಡ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ.24. ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಾ ಸಂಸ್ಥಾನದ ಆಶ್ರಯದಲ್ಲಿ ಗುಲ್ಬರ್ಗದಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕಡಬದ ಸರಸ್ವತಿ ಪದವಿ ಪೂರ್ವ ಕಾಲೇಜಿನ ತಂಡ ಪ್ರಥಮ ಸ್ಥಾನ ಗಳಿಸಿ ಅಂತರ್ರಾಜ್ಯ ಕಬಡ್ಡಿ ಸ್ಪರ್ಧೆಗೆ ಆಯ್ಕೆಗೊಂಡಿದೆ.

 

ರಾಜ್ಯ ಮಟ್ಟದ ತರುಣರ ವಿಭಾಗದ ಸ್ಪರ್ಧೆಯಲ್ಲಿ ಕಡಬ ಸರಸ್ವತಿ ವಿದ್ಯಾಲಯದ ಕಬಡ್ಡಿ ತಂಡದಲ್ಲಿ ವಿದ್ಯಾರ್ಥಿಗಳಾದ ನಿತೇಶ್, ಹರ್ಷಿತ್, ಸಂತೋಷ್, ಅಕ್ಷತ್, ರತನ್, ಡಿತೀನ್, ಪ್ರತೀಕ್, ಯತೀನ್, ದುರ್ಗಾಪ್ರಸಾದ್, ಕಾರ್ತಿಕ್ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದು, ಆಂದ್ರಪ್ರದೇಶದ ಗುಂಟೂರ್ನಲ್ಲಿ ನಡೆಯುವ ಅಂತರ್ರಾಜ್ಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಗೊಂಡಿದ್ದಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕ ಲಕ್ಷ್ಮೀಶ, ಶಿಕ್ಷಕ ಶಿವಪ್ರಸಾದ್, ಶೇಖರ ಪೂಜಾರಿ ಹಾಗೂ ಇನ್ನಿತರರು ತರಬೇತಿ ನೀಡಿದ್ದಾರೆ.

Scroll to Top