ದಿಲ್ಲಿಯಲ್ಲಿ ಮತ್ತೆ ಅಗ್ನಿ ದುರಂತ: ಓರ್ವ ಸಾವು, ಹಲವು ಮಂದಿಗೆ ಗಾಯ

ಹೊಸದಿಲ್ಲಿ, ಜ.9:ಇಲ್ಲಿನ ಕೈಗಾರಿಕ ಪ್ರದೇಶವೊಂದರಲ್ಲಿ ಇಂದು ಮುಂಜಾನೆ ಬೆಂಕಿ ದುರಂತ ಸಂಭವಿಸಿದ್ದು, ಓರ್ವ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಪೂರ್ವ ದಿಲ್ಲಿ ಯ ಪತ್ ಪರ್ ಗಂಜ್‌ನಲ್ಲಿ ನಡೆದಿದೆ.

Nk Kukke

ಸ್ಥಳಕ್ಕೆ 32 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು,  ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಪತ್ ಪರ್ ಗಂಜ್ ಕೈಗಾರಿಕಾ ಪ್ರದೇಶದ ಪೇಪರ್ ಪ್ರಿಂಟಿಗ್ ಪ್ರೆಸ್ ನಲ್ಲಿ ಈ ಅಗ್ನಿ ದುರಂತ ಸಂಭವಿಸಿದ್ದು ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಾರದ ಹಿಂದೆ ದಿಲ್ಲಿ ಪಿರಾಗ್ರಹಿ ಇನ್ ವರ್ಟರ್ ಬ್ಯಾಟರಿ ಉತ್ಪಾದನಾ ಘಟಕದಲ್ಲಿ ಬೆಂಕಿ ಅವಘಡ ಕಾಣಿಸಿಕೊಂಡು ರಕ್ಷಣಾ ಕಾರ್ಯಕ್ಕೆ ತೆರಳಿದ್ದ ಓರ್ವ ಅಗ್ನಿಶಾಮಕ ಸಿಬ್ಬಂದಿ ಸಾವನ್ನಪ್ಪಿ, 14 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆ ಘಟನೆಯಲ್ಲಿ ಸ್ಪೋಟ ಸಂಭವಿಸಿ ಕಟ್ಟಡದ ಭಾಗವೊಂದು ಭಾಗಶಃ ಕುಸಿದಿತ್ತು.

Also Read  ಜುಲೈ ಅಂತ್ಯಕ್ಕೆ PU, ಆಗಸ್ಟ್ ಮೊದಲ ವಾರದಲ್ಲಿ SSLC ಫಲಿತಾಂಶ ➤ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

error: Content is protected !!
Scroll to Top