ಹೊಸದಿಲ್ಲಿ, ಜ.6: ಇಲ್ಲಿನ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು) ದಲ್ಲಿ ರವಿವಾರ ರಾತ್ರಿ ಅಮಾಯಕ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ಮೇಲೆ ಐವತ್ತುಕ್ಕೂ ಅಧಿಕ ಮಾಸ್ಕ್ ಧರಿಸಿದ ಪುಂಡರು ನಡೆದ ಮಾರಾಮಾರಿ ವೇಳೆಯಲ್ಲಿ ಮಾಸ್ಕ್ ಧರಿಸಿದ ಪುಂಡರು ಮಾರಣಾಂತಿಕ ಹಲ್ಲೆ ನಡೆಸಿದೆ.

ಮಾಸ್ಕ್ ಧರಿಸಿದ ಗುಂಪು ಕೈಯಲ್ಲಿ ದೊಣ್ಣೆ ಮತ್ತಿತರ ಮಾರಕಾಸ್ತ್ರಗಳನ್ನು ಹಿಡಿದು ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಅಟ್ಟಾಡಿಸಿ ಹಲ್ಲೆ ಮಾಡಿದೆ. ಅಲ್ಲದೇ ವಿವಿಯಲ್ಲಿನ ಸಬರಮತಿ ಹಾಸ್ಟೆಲ್ ಗಾಜುಗಳು, ಪೀಠೋಪಕರಣಗಳನ್ನು ಪುಡಿ ಪುಡಿಮಾಡಿದೆ. ಪುಂಡರ ಅಟ್ಟಹಾಸದ ದೃಶ್ಯಾವಳಿಗಳು ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Also Read  ಕೇಂದ್ರ ಬಜೆಟ್; ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆ ಪ್ರಕಟ