ದಿಲ್ಲಿಯಲ್ಲಿ ಮತ್ತೊಂದು ಅಗ್ನಿ ಅವಘಡ: 9ಮಂದಿ ಸಜೀವ ದಹನ

ಹೊಸದಿಲ್ಲಿ, ಡಿ.23 : ದಿಲ್ಲಿಯಲ್ಲಿ ಮತ್ತೊಂದು ಅಗ್ನಿಅವಘಡ ಸಂಭವಿಸಿದ್ದು,  ಬಟ್ಟೆಯ ಗೋದಾಮಿಗೆ ಬೆಂಕಿ ಹತ್ತಿ 9 ಮಂದಿ ಮೃತಪಟ್ಟ ಘಟನೆ ಕಿರಾರಿ ಎಂಬಲ್ಲಿ ನಡೆದಿದೆ.

ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಂಕಿ ಹತ್ತಿಕೊಳ್ಳಲು ಕಾರಣವೇನೆಂದು ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಡಿಸೆಂಬರ್ ಆರಂಭದಲ್ಲಿ ದಿಲ್ಲಿಯ ಅನಜ್ ಮಾಂಡಿ ಕಾರ್ಖಾನೆಯಲ್ಲಿ ನಸುಕಿನ ಜಾವ ಬೆಂಕಿ ಹತ್ತಿಕೊಂಡು ಅಲ್ಲಿ ಮಲಗಿದ್ದ 43 ಮಂದಿ ಮೃತಪಟ್ಟಿದ್ದರು.

Nk Kukke

error: Content is protected !!
Scroll to Top