ಎಷ್ಟೇ ವಿರೋಧವಿದ್ದರೂ ಪೌರತ್ವ ಕಾಯ್ದೆ ಜಾರಿಗೆ ಶತಸಿದ್ದ: ಅಮಿತ್ ಶಾ

ಹೊಸದಿಲ್ಲಿ, ಡಿ.18: ವಿಪಕ್ಷಗಳು ಎಷ್ಟೇ ವಿರೋಧಿಸಿದರೂ ಪೌರತ್ವ  ಕಾಯ್ದೆ ತಂದೇ ತರುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರು ಭಾರತೀಯ ರಾಷ್ಟ್ರೀಯತೆಯನ್ನು ಪಡೆದುಕೊಳ್ಳುವುದು ಮತ್ತು ಗೌರವದಿಂದ ದೇಶದಲ್ಲಿ ವಾಸಿಸುವುದನ್ನು ಮೋದಿ ಸರ್ಕಾರ ಖಚಿತಪಡಿಸುತ್ತದೆ ಎಂದು ಪ್ರತಿಪಾದಿಸಿದರು. ಈ ಹೊಸ ಕಾನೂನಿನ ವಿರುದ್ಧವಾಗಿರುವವರು ಈ ಕಾಯ್ದೆಯನ್ನು ತಮ್ಮಿಂದ ಸಾಧ್ಯವಾದಷ್ಟು ವಿರೋಧಿಸುವಂತೆ ಸವಾಲು ಹಾಕಿದರು. ಏನೇ ಬರಲಿ, ಈ ನಿರಾಶ್ರಿತರಿಗೆ ಭಾರತೀಯ ಪೌರತ್ವ ಸಿಗುತ್ತದೆ ಮತ್ತು ಅವರ ಗೌರವದಿಂದ ಭಾರತದಲ್ಲಿ ಬದುಕುವುದು ಖಚಿತ. ಈ ವಿಚಾರದಲ್ಲಿ ಮೋದಿ ಸರ್ಕಾರದ ದೃಢವಾಗಿದೆ ಎಂದರು.

Also Read  ಅರ್ಧದಲ್ಲಿ ನಿಂತ ಐಪಿಎಲ್ ಪುನರಾರಂಭ ➤ ಬಿಸಿಸಿಐ ಮಹತ್ವದ ನಿರ್ಧಾರ

2019 ಪೌರತ್ವ (ತಿದ್ದುಪಡಿ) ಕಾಯ್ದೆ(ಸಿಎಎ)ಯಿಂದಾಗಿ ಯಾವುದೇ ಭಾರತೀಯನು ತನ್ನ ರಾಷ್ಟ್ರೀಯತೆಯನ್ನು ಕಳೆದುಕೊಳ್ಳುವುದಿಲ್ಲ. ಇನ್ನು ಮೂರು ನೆರೆಯ ರಾಷ್ಟ್ರಗಳ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಶಾಸನವನ್ನು ಜಾರಿಗೆ ತರಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

error: Content is protected !!
Scroll to Top