ದಿಲ್ಲಿ: ಮನೆಗೆ ಬೆಂಕಿ ತಗುಲಿ ಮೂವರು ಸಜೀವ ದಹನ

ಹೊಸದಿಲ್ಲಿ, ಡಿ.15: ಮನೆಯೊಂದಕ್ಕೆ  ಬೆಂಕಿ ತಗುಲಿದ ಪರಿಣಾಮ ಮೂವರು ಮಹಿಳೆಯರು ಸಜೀವ ದಹನವಾಗಿ, ನಾಲ್ವರು ಗಂಭೀರ ಗಾಯಗೊಂಡ ಘಟನೆ ಶಾಲಿಮಾರ್ ಭಾಗ್ ಪ್ರದೇಶದಲ್ಲಿ ಶನಿವಾರ ನಡೆದಿದೆ.

ಮೃತರನ್ನು ಕಾಂತ (75), ಕಿರಣ್ ಶರ್ಮಾ (65) ಸೋಮ್ ವತಿ(42) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಲಜ್ ವಂತಿ, ಈನಾ, ಅಕ್ಷಿತ್ ಮತ್ತು ವನ್ಸಿಕಾ ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ  6 ಗಂಟೆ ವೇಳೆಗೆ  ಬೆಂಕಿ ಅವಘಡವಾಗಿದ್ದು, ಕೂಡಲೇ ಸ್ಥಳಕ್ಕೆ ಬಂದ  ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಮನೆಯಲ್ಲಿದ್ದ 7 ಮಂದಿಯನ್ನು ರಕ್ಷಿಸಿದ್ದಾರೆ. ಆದರೆ ಅದರಲ್ಲಿ ಮೂವರು ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Also Read  69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ಕನ್ನಡದ ಅತ್ಯುತ್ತಮ ಚಿತ್ರವಾಗಿ 'ಚಾರ್ಲಿ 777' ಆಯ್ಕೆ

error: Content is protected !!
Scroll to Top