ಕೇರಳದಲ್ಲಿ ಚಿನ್ನ ಕದ್ದು ಕಡಬದ ಚಿನ್ನದಂಗಡಿಗೆ ಮಾರಾಟ ➤ ಆರೋಪಿಯೊಂದಿಗೆ ಕಡಬಕ್ಕೆ ಆಗಮಿಸಿದ ಕೇರಳ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಡಿ.13. ಕೇರಳದಲ್ಲಿ ಚಿನ್ನಾಭರಣ ಕಳವು ನಡೆಸಿದ ಅಲ್ಲಿಯ ವ್ಯಕ್ತಿಯೋರ್ವ ಕಡಬದಲ್ಲಿ ವಾಸವಿರುವ ಆತನ ಸಹೋದರನ ಮೂಲಕ ಕಡಬದ ಜ್ಯುವೆಲ್ಲರ್ಸ್ ಮಳಿಗೆಯೊಂದಕ್ಕೆ ಚಿನ್ನವನ್ನು ಮಾರಾಟ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕೇರಳ ಮೂಲದ ಖಾದರ್ ಎಂಬಾತನನ್ನು ಕಡಬಕ್ಕೆ ಕರೆತಂದ ಕೇರಳ ಪೊಲೀಸರು ಕಡಬದ ಜ್ಯುವೆಲ್ಲರಿ ಅಂಗಡಿಗೆ ತೆರಳಿ ಚಿನ್ನವನ್ನು ಮಾರಾಟ ಮಾಡಿರುವ ಬಗ್ಗೆ ಶುಕ್ರವಾರದಂದು ತನಿಖೆ ನಡೆಸಿದ್ದಾರೆ.

ಕೇರಳ ನಿವಾಸಿ ಖಾದರ್ ಎಂಬಾತ ಚಿನ್ನವನ್ನು ಕಳವುಗೈದು ಸ್ವಲ್ಪ ಚಿನ್ನವನ್ನು ಕಡಬದ ಕೇಪು ನಿವಾಸಿ ಶಾಫಿ ಎಂಬವರ ಮೂಲಕ ಕಡಬದ ಜ್ಯುವೆಲ್ಲರಿ ಅಂಗಡಿಗೆ ಮಾರಾಟ ಮಾಡಿಸಿದ್ದನು. ಇದೀಗ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಚಿನ್ನವನ್ನು ಕಳವು ನಡೆಸಿ ಕಡಬದಲ್ಲಿ ಮಾರಾಟ ಮಾಡಿರುವ ಬಗ್ಗೆ ತನಿಖೆಯ ವೇಳೆ ತಿಳಿಸಿದ್ದಾನೆ. ಮಾರಾಟ ಮಾಡಿದ ಶಾಫಿ ಎಂಬಾತ ಇದೀಗ ನಾಪತ್ತೆಯಾಗಿದ್ದು, ಕಡಬ ಪೊಲೀಸರ ಸಹಕಾರದೊಂದಿಗೆ ಕೇರಳ ಪೊಲೀಸರು ಹುಡುಕಾಡುತ್ತಿದ್ದಾರೆ.

Also Read  6,650 ಉದ್ಯೋಗಿಗಳ ವಜಾಗೊಳಿಸಲಿದೆ ಡೆಲ್..!

error: Content is protected !!
Scroll to Top