ತರಗತಿಯಲ್ಲಿ ನಿದ್ದೆಗೆ ಜಾರಿದ ವಿದ್ಯಾರ್ಥಿ: ಕೊಠಡಿಗೆ  ಬೀಗ ಹಾಕಿದ ಶಿಕ್ಷಕಿ

ಪಾಲಾಕಾಡ್‌, ಡಿ.11: ತರಗತಿಯಲ್ಲಿ ನಿದ್ದೆ ಮಾಡುತ್ತಿದ್ದ ವಿದ್ಯಾರ್ಥಿಯನ್ನು ನೋಡದೆ ಕೊಠಡಿಗೆ ಬೀಗ ಹಾಕಿದ ಪರಿಣಾಮ ಶಾಲೆ ಬಿಟ್ಟು ಒಂದು ಗಂಟೆ ತರಗತಿಯೊಳಗೆ ಉಳಿದ ಘಟನೆ ಇಲ್ಲಿನ ಒಟ್ಟಪಾಲಂನಲ್ಲಿ ನಡೆದಿದೆ.

ಸೋಮವಾರ ಸಂಜೆ ತರಗತಿಯಲ್ಲೇ  ವಿದ್ಯಾರ್ಥಿನಿ ನಿದ್ದೆಗೆ ಜಾರಿದ್ದು ತರಗತಿಗೆ ಬೀಗ ಹಾಕಲು ಬಂದ ಶಿಕ್ಷಕಿ ತರಗತಿಯಲ್ಲಿ ವಿದ್ಯಾರ್ಥಿಗಳಿದ್ದಾರೆಯೇ ಎಂದು ಪರಿಶೀಲನೆ ನಡೆಸದೆ ಬೀಗ ಹಾಕಿದ್ದಾರೆ ಎಂದು ತಿಿಳಿದು ಬಂದಿದೆ.

ಶಾಲಾ ಅವಧಿ ಮುಗಿದು ಒಂದು ಗಂಟೆ ಕಳೆದರು ವಿದ್ಯಾರ್ಥಿನಿ ಮನೆಗೆ ಹಿಂದಿರುಗದ ಕಾರಣದಿಂದಾಗಿ ವಿದ್ಯಾರ್ಥಿನಿಯನ್ನು ಹುಡುಕಾಡಿದ್ದು ಶಾಲೆಗೆ ಹೋದಾಗ ಬೀಗ ಜಡಿದ ತರಗತಿಯಲ್ಲೇ ಉಳಿದಿರುವುದು ತಿಳಿದು ಬಂದಿದೆ.

Also Read  ರಾಜತಾಂತ್ರಿಕತೆ ಮತ್ತು ಮಾತುಕತೆ ಸಂಘರ್ಷದ ಶಾಂತಿಯುತ ಪರಿಹಾರ        'ಇದು ಯುದ್ಧದ ಯುಗವಲ್ಲ'- ಪ್ರಧಾನಿ ನರೇಂದ್ರ ಮೋದಿ 

ಶಿಕ್ಷಕಿಯನ್ನು ವಿಚಾರಣೆ ನಡೆಸಿದ ಸಹಾಯಕ ಶಿಕ್ಷಣ ಅಧಿಕಾರಿ ವಿಚಾರಣೆಯ ಭಾಗವಾಗಿ ೫ ದಿನಗಳ ಕಾಲ ಶಾಲೆಗೆ ಹಾಜರಾಗದಂತೆ ತಿಳಿಸಿದ್ದಾರೆ.

error: Content is protected !!
Scroll to Top