ಹೈದರಾಬಾದ್ ಎನ್ ಕೌಂಟರ್ ಸ್ಥಳಕ್ಕೆ ಎನ್ಎಚ್ಆರ್ ಸಿ ತಂಡ ಭೇಟಿ

ಹೈದರಾಬಾದ್, ಡಿ.7: ಪಶುವೈದ್ಯ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಶುಕ್ರವಾರ ಮುಂಜಾನೆ ತೆಲಂಗಾಣ ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿರುವ ಘಟನೆ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸತ್ಯ ಶೋಧನಾ ತಂಡ ಶನಿವಾರ ಬೆಳಗ್ಗೆ ಹೈದರಾಬಾದ್  ಘಟನಾ ಸ್ಥಳಕ್ಕೆ ಆಗಮಿಸಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸತ್ಯ ಶೋಧನಾ ತಂಡ ಎನ್ ಕೌಂಟರ್ ನಡೆದ ಸ್ಥಳದಲ್ಲಿ ತನಿಖೆ ನಡೆಸಿ, ಮಾಹಿತಿಯನ್ನು ಕಲೆ ಹಾಕಲಿದೆ. ನಂತರ ತಂಡ ಮೆಹಬೂಬನಗರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

Also Read  ➤ ಹಲವು ವರ್ಷಗಳ ನಂತರ, ಆಂಧ್ರ ಪ್ರದೇಶದ ನಲ್ಲಮಲ ಅರಣ್ಯದಲ್ಲಿ ಭಾರತೀಯ ತೋಳಗಳು ಪತ್ತೆ!
error: Content is protected !!
Scroll to Top