ಜಾರ್ಖಂಡ್ ವಿಧಾನಸಭೆಗೆ 2ನೇ ಹಂತದ ಮತದಾನ ಆರಂಭ

ರಾಂಚಿ, ಡಿ.6: ಜಾರ್ಖಂಡ್ ರಾಜ್ಯದ ವಿಧಾನ ಸಭಾ 20 ಕ್ಷೇತ್ರಗಳಿಗೆ 2ನೇ ಹಂತದ ಮತದಾನ ಶನಿವಾರ ನಡೆಯುತ್ತಿದೆ. ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಇಂದು ಚುನಾವಣೆ ನಡೆಯುವ ಎಲ್ಲ ಕ್ಷೇತ್ರಗಳು ನಕ್ಸಲ್ ಚಟುವಟಿಕೆಗಳಿಗೆ ಹೆಸರಾಗಿರುವ ಕಾರಣ ಭಾರಿ ಭದ್ರತೆ ಮಾಡಲಾಗಿದೆ. ಸುಮಾರು 40 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದ್ದು, ಶಾಂತಿಯುತ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

29 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 260 ಅಭ್ಯರ್ಥಿಗಳು ಕಣದಲ್ಲಿದ್ದು, ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸುಮಾರು 6066 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 1016 ಮತಗಟ್ಟೆಗಳು ಪಟ್ಟಣ ಪ್ರದೇಶದಲ್ಲಿದ್ದು ಉಳಿದವುಗಳು ಹಳ್ಳಿಗಳಲ್ಲಿವೆ.

Also Read  ನೀವು ಇಷ್ಟಪಡುವಂತಹ ವ್ಯಕ್ತಿ ನಿಮ್ಮವರಂತೆ ಆಗಲು ಈ ಒಂದು ತಂತ್ರವನ್ನು ಮಾಡಿ

ಒಟ್ಟು 20 ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳು ಪರಿಶಿಷ್ಟ ಪಂಗಡ ಮತ್ತು ಒಂದು ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.

error: Content is protected !!
Scroll to Top