ದೇಶವನ್ನು ಬೆಚ್ಚಿಬೀಳಿಸಿದ್ದ ಪಶುವೈದ್ಯೆಯ ಅತ್ಯಾಚಾರಗೈದು ಜೀವಂತ ಸುಟ್ಟ ಪ್ರಕರಣ ➤ ನಾಲ್ವರು ಆರೋಪಿಗಳ ಎನ್‌ಕೌಂಟರ್‌

(ನ್ಯೂಸ್ ಕಡಬ) newskadaba.com ಹೈದರಾಬಾದ್, ಡಿ.06. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪಶುವೈದ್ಯೆಯನ್ನು ಅತ್ಯಾಚಾರಗೈದು ಜೀವಂತ ಸುಟ್ಟಿದ್ದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಲಾಗಿದೆ.

ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಕೇಶವುಲು ಎಂಬವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ಶುಕ್ರವಾರ ಬೆಳಗ್ಗಿನ ಜಾವ ಎನ್‌ಕೌಂಟರ್‌ ನಡೆಸಿದ್ದಾರೆ. ಹೈದರಾಬಾದ್ ಹೊರವಲಯದ ಷಾದ್ ನಗರದಲ್ಲಿ ಎನ್‌ಕೌಂಟರ್ ನಡೆದಿದೆ ಎನ್ನಲಾಗಿದ್ದು, ಎನ್‌ಕೌಂಟರ್‌ ಕಾರ್ಯಾಚರಣೆಯನ್ನು ಕರ್ನಾಟಕದ ಗದಗ್ ಜಿಲ್ಲೆಯ ಅಧಿಕಾರಿಯೋರ್ವರು ನಡೆಸಿದ್ದಾರೆ.

ಕನ್ನಡಿಗರಾದ ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿಶ್ವನಾಥ್ ಸಜ್ಜನ್ ನೇತೃತ್ವದ ತಂಡವು ಇಂದು ಬೆಳಗ್ಗಿನ ಜಾವ ಕೊಲೆ ನಡೆದ ಜಾಗಕ್ಕೆ ಆರೋಪಿಗಳನ್ನು ಪೊಲೀಸರು ಮಹಜರಿಗೆ ಕರೆದೊಯ್ದಿದ್ದ ವೇಳೆ ಶಾದ್‌ನಗರದ ಚಟಾನ್‌ಪಲ್ಲಿ ಬ್ರಿಡ್ಜ್‌ ಮೇಲೆ ಆರೋಪಿಗಳು ಪರಾರಿಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ನಾಲ್ವರು ಅತ್ಯಾಚಾರಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

Also Read  9 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ► ರಾಜ್ಯದಲ್ಲೊಂದು ಭೀಕರ ಅಮಾನುಷ ಘಟನೆ

ಸದ್ಯ ಪಶುವೈದ್ಯೆಯ ಮೇಲಿನ ಈ ಭೀಕರ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿರುವುದಕ್ಕೆ ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿಶ್ವನಾಥ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳ ಸುರಿಮಳೆಯೇ ಹರಿಯುತ್ತಿದೆ.

error: Content is protected !!
Scroll to Top