ಅಯೋಧ್ಯೆ ಭೂವಿವಾದಕ್ಕೆ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ➤ ಅಂತಿಮ ತೀರ್ಪು ಏನೆಂದು ಗೊತ್ತೇ..?

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ನ.09. ಐತಿಹಾಸಿಕ ಅಯೋಧ್ಯೆ ಭೂ ವಿವಾದದ ಐತಿಹಾಸಿಕ ತೀರ್ಪು ಹೊರಬಿದ್ದಿದ್ದು, ವಿವಾದಿತ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಮತ್ತು ಮಸೀದಿ ನಿರ್ಮಾಣಕ್ಕೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಖಾಲಿ ಜಾಗದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿರಲಿಲ್ಲ ಹಾಗೂ ವಿವಾದಿತ ಕಟ್ಟಡದ ಕೆಳಗೆ ನಿರ್ಮಾಣವೊಂದಿತ್ತು ಮತ್ತು ಅದು ಇಸ್ಲಾಮಿಕ್ ಕಟ್ಟಡ ರಚನೆಯಾಗಿರಲಲ್ಲ ಎಂದಿರುವ ಸುಪ್ರೀಂ ಕೋರ್ಟ್, ಕಂದಾಯ ದಾಖಲೆಗಳ ಪ್ರಕಾರ ವಿವಾದಿತ ಜಾಗವು ಸರಕಾರಿ ಜಾಗವಾಗಿದೆ. ಇತಿಹಾಸಕಾರರು ಮತ್ತು ಪ್ರವಾಸಿಗರ ಮಾಹಿತಿಗಳ ಪ್ರಕಾರ ಮಸೀದಿಯ ಒಳಾಂಗಣವು ಶ್ರೀರಾಮನ ಜನ್ಮಸ್ಥಳವೆಂಬುದು ಹಿಂದೂಗಳ ನಂಬಿಕೆಯಾಗಿದ್ದು, 1992ರ ಮಸೀದಿ ದ್ವಂಸ ಪ್ರಕರಣವು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ಮಸೀದಿ ದ್ವಂಸ ಮತ್ತು ಮೂರ್ತಿಗಳ ಸ್ಥಾಪನೆ ಕಾನೂನಿನ ವಿರುದ್ಧವಾಗಿದ್ದು, ವಿವಾದಿತ ಜಮೀನನ್ನು ಮೂರು ಭಾಗಗಳಾಗಿ ಮಾಡಿ ಅಲಹಾಬಾದ್ ಹೈಕೋರ್ಟ್ ತಪ್ಪು ತೀರ್ಪನ್ನು ನೀಡಿತ್ತು.

ವಿವಾದಿತ ಜಮೀನಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಕೇಂದ್ರ ಸರಕಾರವು 3 ತಿಂಗಳಲ್ಲಿ ಯೋಜನೆಯೊಂದನ್ನು ರಚಿಸಲಿದ್ದು, ಮಸೀದಿಯ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಪ್ರತ್ಯೇಕ ಜಮೀನು ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

error: Content is protected !!

Join the Group

Join WhatsApp Group