(ನ್ಯೂಸ್ ಕಡಬ) newskadaba.com ನವದೆಹಲಿ, ನ.08. ಅಯೋಧ್ಯೆಯ ರಾಮಮಂದಿರ ಮತ್ತು ಬಾಬರಿ ಮಸೀದಿ ವಿವಾದದ ಕುರಿತು ವಿಚಾರಣೆ ಮುಗಿಸಿರುವ ಸುಪ್ರೀಂಕೋರ್ಟ್ ಶನಿವಾರ ಬೆಳಿಗ್ಗೆ 10.30ಕ್ಕೆ ತೀರ್ಪು ನೀಡಲಿದೆ.

ಅಯೋಧ್ಯೆಯ ತೀರ್ಪು ಮುಂದಿನ ಒಂದು ವಾರದಲ್ಲಿ ನೀಡಬಹುದೆಂದು ಹೇಳಲಾಗಿತ್ತಾದರೂ, ಶನಿವಾರ ಬೆಳಿಗ್ಗೆಯೇ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯ ಪೀಠವು ತೀರ್ಪು ಹೊರಡಿಸಲಿದೆ. ಆ ಪ್ರಯುಕ್ತ ಉತ್ತರ ಪ್ರದೇಶದಲ್ಲಿ ಹಾಗೂ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ತೀರ್ಪು ಯಾರ ಪರವಾಗಿ ಬಂದರೂ, ಅದನ್ನು ಸಂಯಮದಿಂದ ಸ್ವೀಕರಿಸುವಂತೆ ಉಭಯ ಧರ್ಮದ ಮುಖಂಡರೂ ಈಗಾಗಲೇ ತೀರ್ಮಾನಿಸಿದ್ದಾರೆ.
