ಉಪ್ಪಿನಂಗಡಿ ಏಕಾಏಕಿ ಮುಚ್ಚಳ ತೆರೆದುಕೊಂಡು ಟ್ಯಾಂಕರ್ ನಿಂದ ಗ್ಯಾಸ್ ಸೋರಿಕೆ ➤ ಪರಿಸರದ ಮನೆಯವರ ಸ್ಥಳಾಂತರ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.04. ಗ್ಯಾಸ್ ಟ್ಯಾಂಕರ್ ನ ಮೇಲ್ಭಾಗದ ಮುಚ್ಚಳ ಏಕಾಏಕಿ ಓಪನ್ ಆಗಿ ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿದ್ದರಿಂದ ಪರಿಸರದ ಭೀತಿ ಹುಟ್ಟಿಸಿದ ಘಟನೆ ಉಪ್ಪಿನಂಗಡಿ ಸಮೀಪದ ಕರ್ವೇಲ್ ಎಂಬಲ್ಲಿ ಸೋಮವಾರದಂದು ನಡೆದಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಕಂಪೆನಿಯ ಗ್ಯಾಸ್ ಟ್ಯಾಂಕರ್ ನ ಮೇಲ್ಭಾಗದ ಮುಚ್ಚಳವು ಕರ್ವೇಲ್ ಸಮೀಪ ಏಕಾಏಕಿ ತೆರೆದುಕೊಂಡಿದೆ. ಏಕಾಏಕಿ ಗ್ಯಾಸ್ ಮೇಲ್ಭಾಗಕ್ಕೆ ಚಿಮ್ಮಿದ್ದರಿಂದ ಆತಂಕಗೊಂಡ ಸ್ಥಳೀಯರು ಕೂಡಲೇ ಕರ್ವೇಲ್ ಮಸೀದಿಯಿಂದ ಮೈಕ್ ನಲ್ಲಿ ಅನೌನ್ಸ್ ಮಾಡಿ ಪರಿಸರದಲ್ಲಿ ಬೆಂಕಿ ಉರಿಸದಂತೆ ಮುನ್ನೆಚ್ಚರಿಕೆ ನೀಡಿದ್ದಾರಲ್ಲದೆ ಪರಿಸರದ ಮನೆಯವರನ್ನು ಸ್ಥಳಾಂತರಗೊಳ್ಳುವಂತೆ ಸೂಚಿಸಲಾಯಿತು. ಉಪ್ಪಿನಂಗಡಿ ಠಾಣಾ ಪೊಲೀಸರು ರಸ್ತೆಯ ಎರಡೂ ಬದಿಗಳಲ್ಲಿ ವಾಹನಕ್ಕೆ ತಡೆ ನೀಡಿದರು. ತುರ್ತು ಅನಿಲ ಸೋರಿಕೆ ಕಾರ್ಯಾಚರಣೆ ದಳದವರು ಸ್ಥಳಕ್ಕೆ ಧಾವಿಸಿ ಗ್ಯಾಸ್ ಸೋರಿಕೆಯನ್ನು ಹತೋಟಿಗೆ ತಂದರು.

Also Read  ವಯನಾಡು: ವಿದ್ಯಾರ್ಥಿಗಳಿಗೆ 175 ಸ್ಮಾರ್ಟ್ ಟಿವಿ ನೀಡಿದ ರಾಹುಲ್‌ ಗಾಂಧಿ

error: Content is protected !!
Scroll to Top