ಶ್ರೀನಗರದಲ್ಲಿ ಮತ್ತೆ ಅಟ್ಟಹಾಸ ಮೆರೆದ ಉಗ್ರರು

(ನ್ಯೂಸ್ ಕಡಬ) newskadaba.com, ಶ್ರೀನಗರ. ನ.01. ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದ ಕುಲ್ಗಾಂವ್ ನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು, ಬೋನಿಗಮ್ ಎಂಬ ಗ್ರಾಮದಲ್ಲಿ ಎರಡು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಬೆಂಕಿಗೆ ಆಹುತಿಯಾದ ಒಂದು ವಾಹನ ಕುಲ್ಗಾಂವ್ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅದಿಲ್ ಅಹಮದ್ ಗನಾಯ್ ಅವರಿಗೆ ಸೇರಿದೆ ಎಂದು ತಿಳಿಸಲಾಗಿದೆ. ಮನೆಯ ಹೊರಭಾಗ ಪಾರ್ಕಿಂಗ್ ಮಾಡಿದ್ದ ವೇಳೆ ಇಂದು ಮುಂಜಾನೆ 3 ಗಂಟೆಯ ವೇಳೆಗೆ ಉಗ್ರರು ಬೆಂಕಿ ಹಚ್ಚಿದ್ದಾರೆ.

Also Read  ಇಂದು ಪುತ್ತೂರಿನ ನಾಲ್ವರಿಗೆ ಡೆಡ್ಲಿ ಕೊರೋನಾ ದೃಢ!

ಇತ್ತೀಚಿಗಷ್ಟೇ ಕಾಶ್ಮೀರಿಗರು ಸೇರಿದಂತೆ ಐವರು ಕಾರ್ಮಿಕರನ್ನು ಕುಲ್ಗಾಂವ್ ನಲ್ಲಿ ಭಯೋತ್ಪಾದಕರು ಭೀಕರವಾಗಿ ಹತ್ಯೆ ಮಾಡಿದ್ದರಲ್ಲದೆ ಜೊತೆಗೆ ಟ್ರಕ್ ಚಾಲಕರನ್ನೂ ಕೂಡ ಸರಣಿಯಾಗಿ ಗುಂಡಿಕ್ಕಿ ಕೊಂದಿದ್ದರು.

error: Content is protected !!
Scroll to Top