ವಿವಿಧ ಕ್ಷೇತ್ರದ ಸಾಧಕರಿಗೆ ಸಮಾಜ ರತ್ನ ರಾಷ್ಟ್ರ ಪ್ರಶಸ್ತಿ ➤ ಕಡಬದ ಸುಂದರ ಗೌಡ ಮಂಡೆಕರ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಅ.17. ಬೆಂಗಳೂರಿನ ಶ್ರೀ ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ಸಮಾಜ ರತ್ನ ರಾಷ್ಟ್ರೀಯ ಪ್ರಶಸ್ತಿಗೆ ಕಡಬದ ಉದ್ಯಮಿ ಸುಂದರ ಗೌಡ ಮಂಡೆಕರ ಆಯ್ಕೆಯಾಗಿದ್ದಾರೆ.

ವಿಶ್ವ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯ, ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆ ಮಂಗಳೂರು, ಇ.ಸಿ‌.ಆರ್ ಸಮೂಹ ಶಿಕ್ಷಣ ಸಂಸ್ಥೆಗಳು ಉಡುಪಿ, ಸೂರಜ್ ಶಿಕ್ಷಣ ಸಂಸ್ಥೆ ಮುಡಿಪು ಹಾಗೂ ಬುಶ್ರಾ ಶಿಕ್ಷಣ ಸಂಸ್ಥೆ ಕಾವು ಪುತ್ತೂರು ಇವುಗಳ ಸಹಕಾರದೊಂದಿಗೆ ಹಂಪನಕಟ್ಟೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನವೆಂಬರ್ 03 ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದುದಕ್ಕಾಗಿ ಸುಂದರ ಗೌಡ ಮಂಡೆಕರರವರನ್ನು ಈ ಪ್ರಶಸ್ತಿ ಅರಸಿ ಬಂದಿದೆ.

Also Read  'ಥ್ರೆಡ್ಸ್'ನಲ್ಲಿ ದಾಖಲೆ ಬರೆದ ಅಲ್ಲು ಅರ್ಜುನ್

error: Content is protected !!
Scroll to Top