(ನ್ಯೂಸ್ ಕಡಬ) newskadaba.com ನವದೆಹಲಿ, ಅ.15. ನೋಟು ಅಮಾನ್ಯೀಕರಣದ ನಂತರ ಚಲಾವಣೆಗೆ ಬಂದಿದ್ದ 2000 ರೂ. ಮುಖಬೆಲೆಯ ನೋಟಿನ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸ್ಥಗಿತಗೊಳಿಸಿದ್ದು, 2000 ರೂ. ನೋಟನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂಬ ಸುದ್ದಿಗೆ ಪುಷ್ಟಿ ನೀಡಿದಂತಾಗಿದೆ.
ಈ ಬಗ್ಗೆ ಆರ್ಟಿಐ ಅರ್ಜಿಯ ಮೂಲಕ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಿಸರ್ವ್ ಬ್ಯಾಂಕ್ ಪ್ರಸಕ್ತ ವರ್ಷದಲ್ಲಿ 2 ಸಾವಿರ ರೂ. ಮುಖಬೆಲೆಯ ಒಂದು ನೋಟನ್ನೂ ಮುದ್ರಿಸಿಲ್ಲ ಸ್ಪಷ್ಟಪಡಿಸಿದೆ. ಈ ಮೂಲಕ 2000 ರೂ. ಮುಖಬೆಲೆಯ ನೋಟುಗಳು ಚಲಾವಣೆಯನ್ನು ಹಂತ ಹಂತವಾಗಿ ಕಡತಗೊಳಿಸುತ್ತಿದೆ.