ಮುಂದಿನ ಎರಡು ವರ್ಷಗಳಲ್ಲಿ ಕಿದು ಸಿಪಿಸಿಆರ್ಐ ವಿಶ್ವ ವಿದ್ಯಾಲಯವಾಗಿ ಅಭಿವೃದ್ಧಿ ➤ ಕೃಷಿ ಮೇಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಭರವಸೆ

Nalin Kumar kateel

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ.14. ಬಿಳಿನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಕಿದು (ಸಿಪಿಸಿಆರ್ಐ) ಸಂಶೋಧನ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ಭರವಸೆ ನೀಡಿದರು.

ಅವರು ಕಿದು ಸಿಪಿಸಿಆರ್ಐ ನಲ್ಲಿ ನಡೆದ ಎರಡು ದಿನಗಳ ಕೃಷಿ ಮೇಳಕ್ಕೆ ಭೇಟಿ ನೀಡಿ ಕೃಷಿಕರನ್ನು ಉದ್ದೇಶಿಸಿ ಮಾತನಾಡಿದರು. ಕೃಷಿ ಅಭಿವೃದ್ಧಿಗಾಗಿ ಕಿದು ಸಿಪಿಸಿಆರ್ಐ ನ್ನು ಮುಂದಿನ ಎರಡು ವರ್ಷಗಳಲ್ಲಿ ಕೃಷಿ ವಿಶ್ವವಿದ್ಯಾಲಯವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಐಸಿಎಆರ್‌ ನಿರ್ದೇಶಕಿ ಡಾ| ಅನಿತ ಕರೂನ್‌, ಅಧಿಕಾರಿಗಳಾದ ಡಾ| ಮುರಳೀಧರ್‌, ಡಾ| ರವಿ ಭಟ್‌, ಡಾ| ವಿನಿರಾಳ್‌, ಡಾ| ಕೆ. ಸಂಶುದ್ದೀನ್‌, ಡಾ| ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Also Read  23 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ 6 ಮಕ್ಕಳ ತಂದೆ

error: Content is protected !!
Scroll to Top