ಕಡಬ: ‘ಒಂದು ದೇಶ – ಒಂದು ಸಂವಿಧಾನ’ ಜನಜಾಗೃತಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಸೆ.29. ನಮ್ಮನ್ನಾಳಿದ ಕಾಂಗ್ರೆಸ್ಸಿಗರ ಅಧಿಕಾರ ದಾಹದ ಸ್ವಾರ್ಥ ರಾಜಕಾರಣದಿಂದ ಕಾಶ್ಮೀರ ಜನತೆ ದೇಶದ ಏಕತೆಯಿಂದ ದೂರ ಉಳಿಯಬೇಕಾಗಿತ್ತು. ಆದರೆ ಸರ್ಮಪಣಾ ಭಾವದ ಬಿಜೆಪಿ ಸರಕಾರ ಕಾಶ್ಮೀರದ ವಿಧಿ 370 ರದ್ದುಗೊಳಿಸಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದೆ ಎಂದು ಶಾಸಕ ಎಸ್.ಅಂಗಾರ ಹೇಳಿದರು.

ಅವರು ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ರಾಷ್ಟ್ರೀಯ ಏಕತಾ ಅಭಿಯಾನಯದ ಅಡಿಯಲ್ಲಿ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿಧಿ 370 ರದ್ದತಿ ಬಗ್ಗೆ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಪಡೆದ ಆರಂಭದಿಂದಲೂ ಕಾಂಗ್ರೆಸ್ಸಿಗರ ಅಧಿಕಾರದ ಆಸೆಯಿಂದಾಗಿ ಕಾಶ್ಮೀರದ ಅಭಿವೃದ್ದಿಗೆ ಕಂಟಕವಾಗಿತ್ತು. ಇದರಿಂದ ಅಲ್ಲಿನ ಜನತೆ ದೇಶದಲ್ಲಿನ ಪ್ರಜಾಪ್ರಭುತ್ವದಲ್ಲಿ ವಿಲೀನಗೊಳ್ಳಲು ಸಾಧ್ಯವಾಗಿಲ್ಲ. ಬಿಜೆಪಿ ಸರಕಾರದ ನೇರ ನಡೆ ದೇಶದ ಅಭಿವೃದ್ದಿಯ ಯೋಜನೆಗಳಿಂದ ಕಾಶ್ಮೀರದ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಆ ಮೂಲಕ ಕಾಶ್ಮೀರದ ಅಭಿವೃದ್ದಿ ವಿಚಾರದಲ್ಲಿ ಸಂಕಲ್ಪತೊಟ್ಟ ಶ್ಯಾಮಪ್ರಸಾದ್ ಅವರ ಕಲ್ಪನೆಯನ್ನು ನರೇಂದ್ರ ಮೋದಿ ಸಾಕಾರಗೊಳಿಸಿದಂತಾಗಿದೆ ಎಂದರು.

Also Read  ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ ಪ್ರತಿಮೆಯ ವಿನ್ಯಾಸಗಾರ ಅರೆಸ್ಟ್  

ಬಿಜೆಪಿ ರಾಜ್ಯ ವಕ್ತಾರ ವಿವೇಕ್ ರೆಡ್ಡಿ ಮಾತನಾಡಿ, ಕಾಶ್ಮೀರ ದೇವಾಲಯದ ಬೀಡು. ನಮ್ಮ ಸನಾತನ ಧರ್ಮದ ಉಗಮ ನೆಲವಾಗಿದೆ. ಇಲ್ಲಿನ ಕಾನೂನಿನ ತೊಡಕಿನಿಂದ ಹಿಂದೂಗಳು ಅತ್ತ ತೆರಳುವುದಕ್ಕೂ ನಿರ್ಬಂಧವಿತ್ತು. ಆದರೆ ನರೇಂದ್ರ ಮೋದಿ ವಿಧಿ 370 ರದ್ದುಗೊಳಿಸಿದ ಪರಿಣಾಮ ದೇಶದಲ್ಲಿ ಏಕತೆ ಉಂಟಾಗಿ ಕಾಶ್ಮೀರವೂ ನಮ್ಮ ಆಸ್ತಿ ಎಂದು ಪರಿಗಣಿಸುವಂತಾಗಿದೆ. ದೇಶದ ಅಭಿವೃದ್ಧಿಯಲ್ಲಿ ಇಚ್ಚಾ ಶಕ್ತಿಯಿದ್ದರೆ ಸಾಧಿಸುವುದು ಸುಲಭ ಎಂಬುದನ್ನು ಕೇಂದ್ರ ಸರಕಾರ ತೋರಿಸಿಕೊಟ್ಟಿದೆ . ಜನಸಾಮಾನ್ಯನಿಗೂ ಈ ಐತಿಹಾಸಿಕ ನಿರ್ಣಯದ ಬಗ್ಗೆ ಕಾರ್ಯಕರ್ತರು ತಿಳಿಸಬೇಕು. ಆ ಮೂಲಕ ಕೇಂದ್ರ ಸರಕಾರದ ಧೈರ್ಯ, ದೇಶದ ಬಗ್ಗೆ ವಿಶ್ವಾಸ ಮೂಡಿಸಬೇಕು ಎಂದರು.

Also Read  2ನೇ ತರಗತಿ ಬಾಲಕನ ಬರ್ಬರ ಹತ್ಯೆ ► ಶಾಲಾ ಟಾಯ್ಲೆಟ್‍ನಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಶವ ಪತ್ತೆ..!!!

ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪೂಜಾ ಪೈ, ಉಪಾಧ್ಯಕ್ಷೆ ಭಾಗೀರಥಿ ಮುರುಳ್ಯ, ಸುಳ್ಯ ಮಂಡಲ ಉಪಾಧ್ಯಕ್ಷೆ ಪುಲಸ್ತ್ಯಾ ರೈ ಮಾತನಾಡಿದರು. ಸುಬೋದ್ ಶೆಟ್ಟಿ ಮೇನಾಲ ಸ್ವಾಗತಿಸಿದರು. ವಾಡ್ಯಪ್ಪ ಗೌಡ ಎರ್ಮಾಯಿಲ್ ವಂದಿಸಿದರು. ಶಿವಪ್ರಸಾದ್ ಮೈಲೇರಿ ನಿರೂಪಿಸಿದರು.

error: Content is protected !!
Scroll to Top