ಕೋಡಿಂಬಾಳ ರೈಲು ನಿಲ್ದಾಣ ಮೇಲ್ದರ್ಜೆಗೆ ಏರಿಸುವಂತೆ ಸಂಸದರಿಗೆ ಮನವಿ ➤ ಸಂಸದರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಕಡಬ ಬಿಜೆಪಿಯ ನಿಯೋಗ

(ನ್ಯೂಸ್ ಕಡಬ) newskadaba.com ಕಡಬ, ಸೆ.13. ನಾದುರಸ್ತಿಯಲ್ಲಿರುವ ಕೋಡಿಂಬಾಳ ರೈಲು ನಿಲ್ದಾಣವನ್ನು ಮೇಲ್ದರ್ಜೇಗೇರಿಸಿ, ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಅವಕಾಶ ಮಾಡಿಕೊಡಬೇಕೆಂದು ಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ಬಿಜೆಪಿಯ ನಿಯೋಗವೊಂದು ಸಂಸದರಿಗೆ ಮನವಿ ಮಾಡಿತು.

ಶುಕ್ರವಾರದಂದು ಮಂಗಳೂರಿನಲ್ಲಿ ಸಂಸದರಿಗೆ ಮನವಿ ಸಲ್ಲಿಸಿದ ನಿಯೋಗವು, ಕೋಡಿಂಬಾಳ ರೈಲು ನಿಲ್ದಾಣವು ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು, ಕಡಬ ತಾಲೂಕು ಕೇಂದ್ರದ ಸಮೀಪದಲ್ಲಿರುವ ಕೋಡಿಂಬಾಳ ರೈಲು ನಿಲ್ದಾಣದಿಂದ ಸಾವಿರಾರು ಜನ ಮಂಗಳೂರು – ಬೆಂಗಳೂರು ಮತ್ತು ಇತರ ದೂರದ ಊರುಗಳಿಗೆ ಪ್ರಯಾಣಿಸಲು ಈ ರೈಲು ನಿಲ್ದಾಣವನ್ನು ಅವಲಂಬಿಸಿದ್ದಾರೆ. ಸದ್ರಿ ರೈಲು ನಿಲ್ದಾಣವನ್ನು ಮೇಲ್ದರ್ಜೇಗೇರಿಸಿ ಎಲ್ಲ ರೀತಿಯ ರೈಲುಗಳಿಗೆ (ಎಕ್ಸ್‌ಪ್ರೆಸ್) ನಿಲುಗಡೆಗೆ ಅವಕಾಶ ಮಾಡಿಕೊಡಬೇಕಾಗಿ ಮತ್ತು ಸದ್ರಿ ರೈಲು ನಿಲ್ದಾಣಕ್ಕೆ ಶೀಘ್ರವಾಗಿ ಪ್ಲ್ಯಾಟ್‌ಫಾರ್ಮ್ ಹಾಗೂ ಶೌಚಾಲಯವನ್ನು ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿತು.

Also Read  ಜಮೀನಿನಲ್ಲಿ ಸಿಕ್ಕಿದ ವಜ್ರ ರೈತ ರಾತ್ರೋರಾತ್ರಿ ಕೋಟ್ಯಾಧಿಪತಿ

ನಿಯೋಗದಲ್ಲಿ ಕಡಬ ಮಾಜಿ ಜಿ.ಪಂ. ಸದಸ್ಯ ಕೃಷ್ಣ ಶೆಟ್ಟಿ, ಬಿಜೆಪಿ ಮುಖಂಡರಾದ ಪ್ರಕಾಶ್ ಎನ್.ಕೆ, ಅಶೋಕ್ ಕುಮಾರ್, ಫಯಾಜ್ ಕೆನರಾ ಉಪಸ್ಥಿತರಿದ್ದರು.

error: Content is protected !!
Scroll to Top