ಪುತ್ತೂರು: ಖಾಸಗಿ ಕಾಲೇಜು ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ಪ್ರಕರಣ ➤ ವಾಟ್ಸ್ಅಪ್ ನಲ್ಲಿ ವೀಡಿಯೋ ವೈರಲ್ ಹೇಗಾಯ್ತು ಗೊತ್ತೇ..?

(ನ್ಯೂಸ್ ಕಡಬ) newskadaba.com ಪುತ್ತೂರು, ಜು.04. ಪುತ್ತೂರಿನ ಕಾಲೇಜೊಂದರ ವಿಧ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವುದು ಹೇಗೆಂದು ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.

ಪುತ್ತೂರಿನ ಪ್ರತಿಷ್ಠಿತ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯಾದ ಬಂಟ್ವಾಳ ನಿವಾಸಿ ಪ್ರಖ್ಯಾತ್ ಎಂಬಾತನು ತನ್ನ ಸ್ನೇಹಿತರೊಂದಿಗೆ ಸೇರಿ ನಡೆಸಿರುವ ಸಾಮೂಹಿಕ ಅತ್ಯಾಚಾರದ ವಿಡಿಯೋವನ್ನು ತನ್ನ ವಾಟ್ಸ್ಅಪ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದು ಈ ವಿಡಿಯೋವನ್ನು ಅದೇ ಕಾಲೇಜಿನ ಮೋಹಿತ್‌ ಎಂಬಾತನು ತನ್ನ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡಿದ್ದನು.

ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ನಡುವೆ ಜಗಳವಾಗಿದ್ದು, ವೈಷಮ್ಯ ಬೆಳೆಸಿಕೊಂಡ ಕೆಲವರು ಒಂದು ಗುಂಪಿನಲ್ಲಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ತೇಜೋವಧೆ ಮಾಡುವ ಉದ್ದೇಶದಿಂದ ಶ್ರೇಯಾನ್ಸ್ ಎಸ್. ಎಂಬಾತ ಬೇರೆಯವರ ಮೂಲಕ ದೊರೆತ ಈ ವಿಡಿಯೋವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದನು. ಅದು ವೈರಲ್ ಆಗಿದ್ದರಿಂದ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರಕರಣದ ಜಾಡು ಹಿಡಿದು ವಾಟ್ಸ್ಅಪ್ ನಲ್ಲಿ ಶೇರ್ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ➤ಇಬ್ಬರು ಮೃತ, 47 ಮಂದಿಗೆ ಗಾಯ

error: Content is protected !!
Scroll to Top