(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.19. ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನವು ಭಾನುವಾರದಂದು ಮುಕ್ತಾಯವಾಗಿದ್ದು, ವಿವಿಧ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ.
ಬಹುತೇಕ ಸಂಸ್ಥೆಗಳ ಎಕ್ಸಿಟ್ ಪೋಲ್ ಗಳ ಪ್ರಕಾರ ಕೇಂದ್ರದಲ್ಲಿ ಎರಡನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟವು ಸರ್ಕಾರ ರಚಿಸುವುದು ಖಚಿತವಾಗಿದೆ. ಕರ್ನಾಟಕದಲ್ಲೂ ಬಿಜೆಪಿಯು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದ್ದು, ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟಕ್ಕೆ ಶಾಕ್ ನೀಡಲಿದೆ.
- ಎಬಿಪಿ ನ್ಯೂಸ್: ಬಿಜೆಪಿ 15, ಕಾಂಗ್ರೆಸ್ – ಜೆಡಿಎಸ್ 13 ಇತರ – 0
- ಟೈಮ್ಸ್ ನೌ ಸಮೀಕ್ಷೆ : ಬಿಜೆಪಿ 21, ಕಾಂಗ್ರೆಸ್ – ಜೆಡಿಎಸ್ 7, ಇತರ 0
- ಇಂಡಿಯಾ ಟಿವಿ ಸಮೀಕ್ಷೆ: ಬಿಜೆಪಿ 17, ಕಾಂಗ್ರೆಸ್ – ಜೆಡಿಎಸ್ 11, ಇತರೆ 0
- ಎಬಿಪಿ ನ್ಯೂಸ್ ಸಮೀಕ್ಷೆ: ಬಿಜೆಪಿ 15, ಕಾಂಗ್ರೆಸ್-ಜೆಡಿಎಸ್ 13, ಇತರ 0
- ನ್ಯೂಸ್ ನೇಷನ್ ಸಮೀಕ್ಷೆ: ಬಿಜೆಪಿ 18, ಕಾಂಗ್ರೆಸ್-ಜೆಡಿಎಸ್ 10, ಇತರ 0
- ಇಂಡಿಯಾ ಟುಡೆ-ಆಕ್ಸಿಸ್ ಸಮೀಕ್ಷೆ: ಬಿಜೆಪಿ 21-25, ಕಾಂಗ್ರೆಸ್ – ಜೆಡಿಎಸ್ 03-06 , ಇತರ 01
- ಚಾಣಕ್ಯ ಸಮೀಕ್ಷೆ: ಬಿಜೆಪಿ 23, ಕಾಂಗ್ರೆಸ್-ಜೆಡಿಎಸ್ 5, ಇತರ 0